ಪಂಜಾಬ್: ಕಾಂಗ್ರೆಸ್ ಪಕ್ಷದ ಸಿಎಂ ಚರಣ್ ಜಿತ್ ಸಿಂಗ್ ಛನ್ನಿಯನ್ನ ಆಮ್ ಆದ್ಮಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಸೋಲಿಸಿದ್ದಾರೆ. ಇದರಿಂದ ಕಾಂಗ್ರೆಸ್ ಸೇರಿದಂತೆ ಚರಣ್ ಜಿತ್ ಸಿಂಗ್ ಗೂ ಭಾರೀ ಮುಖ ಭಗವಾದಂತಾಗಿದೆ.
ಹೌದು. ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಮೇಲು ಗೈಸಾಧಿಸಿದೆ. ಆದರೆ, ಪಂಜಾಬ್ ನಂತಹ ರಾಜ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಿಗಿದ್ದು, ಆಮ್ ಆದ್ಮಿ ಪಕ್ಷ ಭಾರೀ ಸ್ಥಾನಗಳನ್ನ ಗೆದ್ದು ಬೀಗಿದೆ.
ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಛನ್ನಿ, ಬರ್ನಾಲಾ ಜಿಲ್ಲೆಯ ಬದೌರ್‌ನ್ ಎಸ್ .ಸಿ.ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಮ್ ಆದ್ಮಿ ಪಕ್ಷದ ಮೊಬೈಲ್ ರಿಪೇರಿ ಅಂಡಗಿಯಲ್ಲಿ ಕೆಲಸ ಮಾಡುತ್ತಿದ್ದ,35 ವರ್ಷದ ಲಾಭ್ ಸಿಂಗ್ ಎದುರಾಳಿ ಆಗಿದ್ದರು.
ಆದರೆ, ಪಂಜಾಬ್ ನ ಸಿಎಂ ಗೆ ಇಲ್ಲಿ ಕೇವಲ 26 ಸಾವಿರ ಮತಗಳು ಬಂದಿವೆ. ಲಾಭ್ ಸಿಂಗ್ ಬರೋಬ್ಬರಿ 63 ಸಾವಿರಕ್ಕೂ ಹೆಚ್ಚು ಓಟ್ ಪಡೆದು ಸಿಎಂ ವಿರುದ್ಧವೇ ಗೆದ್ದು ಆಮ್ ಆದ್ಮಿ ಪಕ್ಷದ ಹೆಸರನ್ನ ಉಳಿಸಿದ್ದಾರೆ.
PublicNext
11/03/2022 02:10 pm