ಬೆಂಗಳೂರು : ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಟ್ರೋಲಿಗರ ಬಾಯಿಗೆ ಆಹಾರವಾದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಡಿದ್ದೇದ್ದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನ್ನು ಕಣ್ಮರೆ ಮಾಡಲು ಸಾಧ್ಯವಿಲ್ಲ. ಇಲ್ಲಿನ ಜನರಿಗೆ ಗೊತ್ತು ಕಾಂಗ್ರೆಸ್ ನ ಸಾಧನೆ ಏನು ಅಂತಾ ಅದಕ್ಕೆ ಬರುವ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸುವ ಮೂಲಕ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಸಿದ್ದು ಟ್ವೀಟ್
ಕರ್ನಾಟಕದಲ್ಲಿ ನಮಗೆ ಜನರ ಬೆಂಬಲವೂ ಇದೆ, ಅದನ್ನು ಮತಗಳನ್ನಾಗಿ ಪರಿವರ್ತಿಸುವ ಪಕ್ಷದ ಸಂಘಟನೆಯೂ ಬಲವಾಗಿದೆ. ಜೊತೆಗೆ ನಮ್ಮ ಹಿಂದಿನ ಸರ್ಕಾರದ ಸಾಧನೆ ಕೂಡಾ ಜನರ ಮುಂದಿದೆ. ಪಕ್ಷದ ಗೆಲುವಿಗಾಗಿ ನಾವೆಲ್ಲಾ ಒಂದಾಗಿ ಶ್ರಮಿಸಲಿದ್ದೇವೆ.
ಒಟ್ಟಿನಲ್ಲಿ ಪಂಚರಾಜ್ಯಗಳಲ್ಲಿ ಸೋತ ಕಾಂಗ್ರೆಸ್ ಗೆ ಕರ್ನಾಟಕ ಪ್ರತಿಷ್ಠೆಯ ಕಣವಾಗಿದ್ದು ಮಾಡು ಇಲ್ಲವೆ ಮಡಿ ಎನ್ನುವ ಹಂತದಲ್ಲಿದೆ.
PublicNext
11/03/2022 02:04 pm