ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಅತಂತ್ರ ಸ್ಥಿತಿಯಲ್ಲಿರುವ ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಜ್ಜಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದ ಬಿಜೆಪಿಗೆ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಬಿಜೆಪಿ 20 ಕ್ಷೇತ್ರಗಳು ಗೆದ್ದಿದೆ ಆದರೆ ಬಹುಮತಕ್ಕೆ 21 ಸೀಟುಗಳ ಅವಶ್ಯಕತೆಯಿದೆ.
ಸದ್ಯ ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿದೆ. ಎಂಜಿಪಿ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆಂಟೋನಿಯೊ ವಾಸ್, ಚಂದ್ರಕಾಂತ್ ಶೆಟ್ಟಿ ಮತ್ತು ಅಲೆಕ್ಸ್ ರೆಜಿನಾಲ್ಡ್ ಎಂಬ ಮೂವರು ಪಕ್ಷೇತರರ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈಗ 25 ಸ್ಥಾನಗಳನ್ನು ಹೊಂದಿದ್ದು, 40 ಸದಸ್ಯ ಬಲದ ಸದನದಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನವನ್ನು ಪಡೆದಿವೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಾಗಿ ಗೋವಾ ಬಿಜೆಪಿ ಹೇಳಿದೆ.
PublicNext
11/03/2022 01:23 pm