ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಗೆಲುವಿನ ಖುಷಿಯಲ್ಲಿ ಮುಲಾಯಂ ಸಿಂಗ್ ಕಿರಿಯ ಸೊಸೆ !

ಲಕ್ನೋ:ಹಿಂದೂ,ಮುಸ್ಲಿಂ,ಸಿಖ್,ಕ್ರಿಶ್ಚಿಯನ್ ಇವರೆಲ್ಲರೂ ಬಿಜೆಪಿಯ ಕಾರ್ಯಕರ್ತರೇ. ಹೀಗೆ ವಿಶೇಷವಾಗಿ ಹೇಳಿಕೊಂಡಿದ್ದು ಯಾರು ಗೊತ್ತೇ ? ಹೌದು. ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ.

ಇತ್ತೀಚಿಗೆ ಬಿಜೆಪಿ ಸೇರಿರೋ ಅರ್ಪಣಾ ಯಾದವ್ ಈ ಹೇಳಿಕೆ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಪಕ್ಷ ಗೆಲುವಿನ ನಗೆ ಬೀರಿದ್ದೇ ತಡ, ಕಚೇರಿಗೆ ಬಂದು ಸಂತೋಷನ್ನ ಹಂಚಿಕೊಂಡಿದ್ದಾರೆ.

ಇದಕ್ಕಿಂತ ಉತ್ತಮ ಸರ್ಕಾರ ಮತ್ತು ಉತ್ತಮ ವ್ಯವಸ್ಥೆ ಬರಲು ಸಾಧ್ಯವೇ ಇಲ್ಲ ಎಂದು ಹೇಳಿರೋ ಅಪರ್ಣಾ, ಸಮಾಜವಾದಿ ಪಕ್ಷದಲ್ಲಿದ್ದಾಗಲೂ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಅಭಿಮಾನಿ ಆಗಿದ್ದವರು. ಈಗ ಬಿಜೆಪಿ ಸೇರಿ ಎಲ್ಲ ಧರ್ಮದವರೂ ಬಿಜೆಪಿ ಕಾರ್ಯಕರ್ತರೇ ಅಂತಲೇ ಹೇಳಿಕೊಟ್ಟಿದ್ದಾರೆ.

Edited By :
PublicNext

PublicNext

11/03/2022 07:41 am

Cinque Terre

95.54 K

Cinque Terre

5

ಸಂಬಂಧಿತ ಸುದ್ದಿ