ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ಅಧಿಕಾರಕ್ಕೆ ಬಂದೆವೆಂದು ಬೀಗಿದವರಿಗೆ ಇದು ಒಳ್ಳೆಯ ಪಾಠ: ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕದಲ್ಲಿ ನಾವು ಇನ್ನೇನು ಅಧಿಕಾರಕ್ಕೆ ಬಂದೇಬಿಟ್ಟೆವು ಎಂದು ಬೀಗುತ್ತಿದ್ದವರಿಗೆ ಇಂದಿನ ಚುನಾವಣಾ ಫಲಿತಾಂಶ ಒಳ್ಳೆಯ ಪಾಠ ಕಲಿಸಿದೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಐದು ರಾಜ್ಯಗಳ ಫಲಿತಾಂಶ ಕುರಿತಾಗಿ ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಮೀಕ್ಷೆಗಳು ಭವಿಷ್ಯ ನುಡಿದಂತೆ ಚುನಾವಣೆ ಫಲಿತಾಂಶ ಬರುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜ್ಞಾನೋದಯ ಮಾಡಿಕೊಳ್ಳುವ ಫಲಿತಾಂಶ ಇದಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗೋವಾ, ಪಂಜಾಬ್‌ನಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಕರ್ನಾಟಕದಿಂದ ಸೂತ್ರಧಾರರನ್ನು ಗೋವಾಗೆ ಕಳುಹಿಸಿದ್ದರು ಎಂದ ಅವರು, ಜೆಡಿಎಸ್ ಮುಗಿಸಲು ಹೋದವರಿಗೆ ಈ ಚುನಾವಣೆಯ ಫಲಿತಾಂಶ ಪಾಠ ಕಲಿಸಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಜೆಡಿಎಸ್ ಸೂಕ್ತವಾಗಿದೆ ಎಂಬುದು ಈ ಮೂಲಕ ತಿಳಿಯುತ್ತಿದೆ. ನೀರಾವರಿ ವಿಚಾರಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ ಎಂದ ಅವರು, ಐದು ರಾಜ್ಯಗಳ ಪರಿಸ್ಥಿತಿ ಬೇರೆ, ನಮ್ಮ ರಾಜ್ಯಗಳ ಪರಿಸ್ಥಿತಿ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.

Edited By : Nagaraj Tulugeri
PublicNext

PublicNext

10/03/2022 05:24 pm

Cinque Terre

71.19 K

Cinque Terre

7

ಸಂಬಂಧಿತ ಸುದ್ದಿ