ಉತ್ತರಾಖಂಡ: ಪಂಚ ರಾಜ್ಯಗಳ ಚುನಾವಣೆಯ ಮತ ಪತ್ರಗಳ ಎಣಿಕೆ ಸಮಯದಲ್ಲಿಯೇ ಉತ್ತರಾಖಂಡ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ಸಿಂಗ್ ರಾವತ್ ಕಾಂಗ್ರೆಸ್ ಮತ್ತೆ ಉತ್ತರಾಖಂಡ ನಲ್ಲಿ ಅಧಿಕಾರಕ್ಕೆ ಪಡೆಯುತ್ತದೆ ಅಂತಲೇ ಹೇಳಿ ಬಿಟ್ಟಿದ್ದಾರೆ.
ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಜಯ ಗಳಿಸುತ್ತದೆ. ಇನ್ನೂ ಎರಡ್ಮೂರು ಗಂಟೆಗಳಲ್ಲಿ ಸ್ಪಷ್ಟ ಫಲಿತಾಂಶ ಹೊರ ಬೀಳುತ್ತದೆ. ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗುತ್ತದೆ. 48 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ. ಈ ಭರವಸೆ ನಮಗಿದೆ ಅಂತಲೇ ಎಎನ್‌ಐ ಗೆ ಹರೀಶ್ ರಾವತ್ ತಿಳಿಸಿದ್ದಾರೆ.
ಉತ್ತರಖಂಡ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ ಸದ್ಯಕ್ಕೆ ಇಲ್ಲಿ ಎರಡನೇ ಸ್ಥಾನದಲ್ಲಿಯೇ ಇದೆ.
PublicNext
10/03/2022 10:34 am