ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಮಧ್ಯಾಹ್ನವೇ ಪಂಚರಾಜ್ಯಗಳ ಭವಿಷ್ಯ ನಿರ್ಧಾರ- ಸಮೀಕ್ಷೆಗಳ ಲೆಕ್ಕಾಚಾರ ಏನು?

ನವದೆಹಲಿ: ದೇಶದಲ್ಲಿಯೇ ಭಾರಿ ಸದ್ದು ಮಾಡಿದ್ದ 2 ತಿಂಗಳಿಂದ ಸುದೀರ್ಘವಾಗಿ ನಡೆದ ಪಂಚರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಯ ಬಹು ನಿರೀಕ್ಷಿತ ಫಲಿತಾಂಶ ಮಧ್ಯಾಹ್ನದ ವೇಳೆಗೆ ಹೊರ ಬೀಳಲಿದೆ. ಎಲ್ಲಾ 5 ರಾಜ್ಯಗಳ ಮತ ಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ.

ಉತ್ತರಪ್ರದೇಶ (403 ಸ್ಥಾನಗಳು), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ಮತ್ತು ಗೋವಾದ(40) ಸ್ಥಾನಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆದಿತ್ತು. ಫೆಬ್ರವರಿ 10 ರಂದು ಉತ್ತರಪ್ರದೇಶ ವಿಧಾನಸಭೆಗೆ ಮೊದಲ ಹಂತದ ಮತದಾನದಿಂದ ಹಿಡಿದು ಮಾರ್ಚ್​ 7 ರಂದು ನಡೆದ ಕೊನೆಯ ಮತ್ತು 7ನೇ ಹಂತದ ಮತದಾನದವರೆಗೂ ಸುದೀರ್ಘ ಕಾಲ ನಡೆದ ಚುನಾವಣೆ ಇದಾಗಿದೆ. ಇದರ ಜೊತೆಗೆ ಉತ್ತರಾಖಂಡ, ಪಂಜಾಬ್​, ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆದರೆ, ಮಣಿಪುರ ವಿಧಾನಸಭೆಗೆ ಫೆಬ್ರವರಿ 27 ಮತ್ತು ಮಾರ್ಚ್​ 3 ರಂದು ಎರಡು ಹಂತದಲ್ಲಿ ಮತದಾನ ಜರುಗಿತ್ತು.

ಸಮೀಕ್ಷೆಗಳ ಲೆಕ್ಕಾಚಾರ ಏನು?:

ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 403 ಸ್ಥಾನಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕಿದೆ. ಬಿಜೆಪಿ ಸುಮಾರು 240 ಕ್ಷೇತ್ರಗಳಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿದ್ದು, ಬಹುಮತಕ್ಕೆ 31 ಸ್ಥಾನಗಳು ಅಗತ್ಯವಾಗಿದೆ. ಇಂಡಿಯಾ ನ್ಯೂಸ್ ಸಮೀಕ್ಷೆಯ ಪ್ರಕಾರ, ಬಿಜೆಪಿ 23 -28, ಕಾಂಗ್ರೆಸ್ 10 -14 ಸ್ಥಾನ ಗಳಿಸಬಹುದು.

ಪಂಜಾಬ್ ನಲ್ಲಿ ಒಟ್ಟು 117 ಸ್ಥಾನಗಳಿದ್ದು, ಬಹುಮತಕ್ಕೆ 59 ಸ್ಥಾನಗಳು ಬೇಕಿದೆ. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬರುವ ಸಂಭಾವ್ಯ ಪಕ್ಷ ಆಮ್ ಆದ್ಮಿ ಪಾರ್ಟಿ ಆಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎಎಪಿ ಅಧಿಕಾರಕ್ಕೇರಲಿದೆ ಎಂದು ತಿಳಿಸಿವೆ.

ಗೋವಾ:

ಭಾರತ್ ವರ್ಷ್ ಮತದಾನೋತ್ತರ ಸಮೀಕ್ಷೆ ಪ್ರಕಾರ, ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಗೋವಾದಲ್ಲಿ ಒಟ್ಟು ಸ್ಥಾನ 40 ಇದ್ದು, ಬಿಜೆಪಿ 17 -19, ಕಾಂಗ್ರೆಸ್ 11 -13, ಎಎಪಿ 1-2, ಇತರೆ 2 -7 ಸ್ಥಾನ ಗಳಿಸಬಹುದು.

ಉತ್ತರಾಖಂಡ್:

ಭಾರತ್ ವರ್ಷ್ ಮತದಾನೋತ್ತರ ಸಮೀಕ್ಷೆ ಪ್ರಕಾರ, ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಉತ್ತರಾಖಂಡ್‌ನಲ್ಲಿ ಒಟ್ಟು 70 ಸ್ಥಾನಗಳಿದ್ದು, ಬಿಜೆಪಿ 29 -34, ಕಾಂಗ್ರೆಸ್ 33 -38, ಎಎಪಿ 0-3, ಇತರೆ 2 -6 ಸ್ಥಾನ ಗಳಿಸಬಹುದು.

Edited By : Vijay Kumar
PublicNext

PublicNext

10/03/2022 07:20 am

Cinque Terre

34.86 K

Cinque Terre

5