ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವಾದಲ್ಲಿ ಬಿಜೆಪಿ ಗೆಲ್ಲೋದು ಪಕ್ಕಾ: ಸಿ.ಟಿ ರವಿ ವಿಶ್ವಾಸ

ಪಣಜಿ: ಈ ಬಾರಿಯೂ ಗೋವಾದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯೋದು ಶತಸಿದ್ಧ. ಇಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೋವಾಗೆ ಬಂದು ಸುಮ್ಮನೇ ಮೀನು ತಿಂದು ಹೋಗಬೇಕಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್​ನಲ್ಲಿ‌ ಇಟ್ಟಿದ್ದಾರೆ. ಕಾಂಗ್ರೆಸ್‌ನವರಿಗೆ ಅವರ ಅಭ್ಯರ್ಥಿಗಳ ಮೇಲೆಯೇ ನಂಬಿಕೆ ಇಲ್ಲ. ಡಿ.ಕೆ.ಶಿವಕುಮಾರ್​ ಅವರಿಂದ ಇಲ್ಲಿ ಯಾವ ಮ್ಯಾಜಿಕ್ ಕೂಡ ನಡೆಯಲ್ಲ. ಡಿಕೆ ಶಿವಕುಮಾರ್ ಅವರು ಗೋವಾದಲ್ಲಿ ಸರ್ಕಾರ ರಚನೆ ಹೊಣೆ ಹೊತ್ತು ಬಂದಿದ್ದಾರೆ. ಇದು ತೀರಾ ಹಾಸ್ಯಾಸ್ಪದ. ಕರ್ನಾಟಕದಲ್ಲೇ ಜೆಡಿಎಸ್-ಕಾಂಗ್ರೆಸ್​ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದ ಡಿಕೆಶಿಗೆ ಗೋವಾದಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಸಿ.ಟಿ ರವಿ ಡಿಕೆಶಿ ಗೋವಾದಲ್ಲಿ ಬಂದು ಮೀನು ತಿಂದು ಹೋಗಬೇಕಷ್ಟೇ ಎಂದಿದ್ದಾರೆ.

Edited By : Nagesh Gaonkar
PublicNext

PublicNext

09/03/2022 07:14 pm

Cinque Terre

197.12 K

Cinque Terre

8

ಸಂಬಂಧಿತ ಸುದ್ದಿ