ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಗಳ್ಳರಿಗೆ ಶಾಕ್ ಕೊಟ್ಟ ಸಿಎಂ ಬಸವರಾಜ್ ಬೊಮ್ಮಾಯಿ !

ಬೆಂಗಳೂರು: ಭೂಗಳ್ಳರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಬಿಗ್ ಶಾಕ್ ಕೊಟ್ಟಿದ್ದಾರೆ. ಸರ್ಕಾರಿ ಜಮೀನನ್ನ ಕಬಳಿಸೋ ಭೂಗಳ್ಳರಿಗೆ ಈಗ ನಡುಕ ಹುಟ್ಟಿದೆ.

ಹೌದು! ಸಿಎಂ ಬಸವರಾಜ್ ಬೊಮ್ಮಾಯಿ ಕಠಿಣ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ನಕಲಿ ದಾಖಲೆಗಳನ್ನ ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಿಸೋ ಭೂಗಳ್ಳರ ಪ್ರಕರಣವನ್ನ ಎಸಿಬಿಗೆ ಒಪ್ಪಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಅಂದ್ಹಾಗೆ ವಿಧಾನ ಸಭೆಯಲ್ಲಿ ನಿಯಮ 69 ರ ಅಡಿ ಜೆಡಿಎಸ್ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ಭೂ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಭೂಗಳ್ಳರ ವಿರುದ್ಧ ಗುಡುಗಿ ಹೆಡೆಮುರಿ ಕಟ್ಟುವುದಾಗಿ ತಿಳಿಸಿದ್ದಾರೆ.

Edited By :
PublicNext

PublicNext

08/03/2022 08:00 am

Cinque Terre

75.78 K

Cinque Terre

13

ಸಂಬಂಧಿತ ಸುದ್ದಿ