ನವದೆಹಲಿ: ಹೊಸ ಮದ್ಯ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಬಿಜೆಪಿ ಕಾರ್ಯಕರ್ತರು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಕಾರನ್ನು ತಡೆದು ಅದರ ಮೇಲೆ ಹತ್ತಿನಿಂತ ಘಟನೆ ಭಾನುವಾರ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಭಟನಾಕಾರರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ದೆಹಲಿಯ ಚಾವ್ಲಾದ ಗೋಯಾಲಾ ವಿಹಾರ್ ಬಳಿ ಈ ಘಟನೆ ನಡೆದಿದೆ. ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಲು ತೆರಳಿದ್ದ ಸತ್ಯೇಂದ್ರ ಜೈನ್ ಅವರನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಬಳಿಕ ಸಚಿವರಿದ್ದ ಕಾರನ್ನು ಸುತ್ತುವರೆದು ಕಾರಿನ ಬಾನೆಟ್ ಹತ್ತಿದ್ದರು. ತಕ್ಷಣವೇ ಪ್ರತಿಭಟನಾಕಾರರನ್ನು ತಡೆಯಲಾಯಿತು ಎಂದು ಹೆಚ್ಚುವರಿ ಡಿಸಿಪಿ (ದ್ವಾರಕಾ) ವಿಕ್ರಮ್ ಸಿಂಗ್ ಹೇಳಿದ್ದಾರೆ.
PublicNext
07/03/2022 02:22 pm