ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒನ್ ನೇಶನ್, ಒನ್ ಲಾ ಆ್ಯಂಡ್ ರಿಸರ್ವೇಷನ್ ಆಗಬೇಕು: ವಚನಾನಂದ ಸ್ವಾಮೀಜಿ ಆಗ್ರಹ

ಹಾವೇರಿ: ಮೇಲ್ವರ್ಗದಲ್ಲಿ ಹುಟ್ಟಿದ್ದೇ ತಪ್ಪಾ ಎಂದು ಮೃತ ನವೀನ್‌ ತಾಯಿ ಪ್ರಶ್ನಿಸಿದ್ದಾರೆ. ಪ್ರತಿಭಾವಂತ ಮಕ್ಕಳು ಏನಾಗಬೇಕು ಅಂದುಕೊಂಡಿದ್ದಾರೋ ಅದು ಆಗುತ್ತಿಲ್ಲ. ಪ್ರತಿಭೆಗೆ ಪ್ರೋತ್ಸಾಹ ಕೊಡಬೇಕು ಎನ್ನುವುದು ಪ್ರತಿಯೊಬ್ಬ ತಾಯಿಯ ಕನಸು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿಯಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಪೋಷಕರನ್ನು ಭೇಟಿಯಾಗಿ ಸಾಂತ್ವನ ತಿಳಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬ ತಾಯಿಯ ನೋವು ಮತ್ತೊಬ್ಬ ತಾಯಿಗೆ ಮಾತ್ರ ಗೊತ್ತಾಗುತ್ತದೆ. ನವೀನ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಇಡಲಾಗಿದೆ. ಯುದ್ಧ ನಿಂತ ಮೇಲೆ ಪಾರ್ಥಿವ ಶರೀರವನ್ನು ತರುವ ಪ್ರಯತ್ನ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಅಲ್ಲಿರುವ ಎಲ್ಲ ಮಕ್ಕಳು ವಾಪಸ್ ಬರಬೇಕು. ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗುವ ವಾತಾವರಣ ಆಗಬಾರದು ಎಂದು ಅವರು ಹೇಳಿದರು.

ಒನ್ ನೇಶನ್ ಒನ್ ರಿಸರ್ವೇಶನ್ ಆಗಬೇಕು. ಒನ್ ನೇಶನ್ ಒನ್ ಲಾ ಆಗಬೇಕು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸರಕಾರ ಎಲ್ಲ ರೀತಿಯಿಂದ ಈ ವಿಚಾರಗಳನ್ನು ಗಮನಿಸುತ್ತಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

Edited By : Nagesh Gaonkar
PublicNext

PublicNext

05/03/2022 10:01 pm

Cinque Terre

58.59 K

Cinque Terre

4

ಸಂಬಂಧಿತ ಸುದ್ದಿ