ಹಾವೇರಿ: ಇತ್ತೀಚೆಗೆ ಉಕ್ರೇನ್ ದೇಶದಲ್ಲಿ ಶೆಲ್ ಬಾಂಬ್ ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡ್ರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ 25 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕುಟುಂಬದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ನವೀನ ತಂದೆ ಶೇಖರಗೌಡ ಅವರ ಕೈಯಲ್ಲಿ ಇಪ್ಪತ್ತೈದು ಲಕ್ಷದ ಚೆಕ್ ನೀಡಿ ಧೈರ್ಯ ತುಂಬಿದರು. ಇದೆ ವೇಳೆ ನವೀನ್ ಮೃತ ದೇಹ ಚಳಗೇರಿಗೆ ತರುವಂತೆ ಗ್ರಾಮಸ್ಥರು ಲಿಖಿತ ಮನವಿ ನೀಡಿದರು.
ಪಾರ್ಥೀವ ಶರೀರವನ್ನು ಶೀಘ್ರದಲ್ಲಿ ತರುವ ಪ್ರಯತ್ನ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಿಎಂಗೆ ಸಂಸದ ಶಿವಕುಮಾರ್ ಉದಾಸಿ, ಸಚಿವರಾದ ಬಿ.ಸಿ. ಪಾಟೀಲ್, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
PublicNext
05/03/2022 09:55 pm