ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಇತರ ದೇಶದ ವಿದ್ಯಾರ್ಥಿಗಳೂ ಇಲ್ಲಿ ಸಿಲುಕಿದ್ದಾರೆ. ಆದರೆ ಭಾರತ ದೇಶವೊಂದೇ ಏರ್‌ಲಿಫ್ಟ್ ಮೂಲಕ ದೇಶದ ವಿದ್ಯಾರ್ಥಿಗಳನ್ನ ತಾಯ್ನಾಡಿಗೆ ಕರೆದುಕೊಂಡು ಬರ್ತಿದೆ.ಅದನ್ನ ಅಷ್ಟೇ ಅದ್ಭುತವಾಗಿಯೇ ಬಿಂಬಿಸೋ ಒಂದು ಕಾರ್ಟೂನ್ ಈಗ ಭಾರಿ ವೈರಲ್ ಆಗುತ್ತಿದೆ.
ಯುದ್ಧಪೀಡಿತ ಉಕ್ರೇನ್‌ನಿಂದ ದೇಶಕ್ಕೆ ವಾಪಸ್ ಆಗುತ್ತಿರೋ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ. ಮೋದಿ ಅವರಿಂದಲೇ ಇದೆಲ್ಲ ಸಾಧ್ಯವಾಯಿತು ಅಂತಲೂ ಮನದುಂಬಿ ಹೇಳಿಕೊಳ್ಳುತ್ತಿದ್ದಾರೆ.
ಇದನ್ನೇ ಬಿಂಬಿಸೋ ಒಂದು ಕಾರ್ಟೂನ್ ಅನ್ನ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಭರವಸೆಯ ಸೇತುವೆ' ಅಂತಲೂ ಬರೆದುಕೊಂಡಿದ್ದಾರೆ. ಇದಕ್ಕೆ ಪರ ಮತ್ತು ವಿರೋಧ ಕಾಮೆಂಟ್ ಗಳೂ ಬಂದಿದೆ.
PublicNext
04/03/2022 02:36 pm