ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲ ಬಜೆಟ್ ಮಂಡಿಸೋ ಮುನ್ನ ಟೆಂಪಲ್ ರನ್ ಮಾಡಿದ್ದಾರೆ. ಆರ್.ಟಿ.ನಗರದಲ್ಲಿರೋ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ಸಮಸ್ತ ಕರ್ನಾಟಕದ ಜನತ ಹೆಸರಲ್ಲಿ ಅರ್ಚನೆ ಮಾಡಿಸಿದರು.ಸುಃಖ,ಶಾಂತಿ,ನೆಮ್ಮದಿ ಕರುಣಿಸಲಿ ಅಂತಲೇ ಪ್ರಾರ್ಥಿಸಿದರು.
ಇಲ್ಲಿಂದ ಹೊರ ಸಿಎಂ, ಬಾಲಬ್ರೂಹಿ ಅತಿಥಿಗೃಹದ ಬಳಿ ಇರೋ ಆಂಜನೇಯ ಟೆಂಪಲ್‌ಗೂ ಭೇಟಿಕೊಟ್ಟು ಆಂಜನೇಯನಿಗೆ ದೀರ್ಘದಂಡ ನಮಸ್ಕಾರ ಹಾಕಿದರು. ಆರತಿ ತಟ್ಟೆಗೆ 500 ರೂಪಾಯಿ ಹಾಕಿದರು.
ಟೆಂಪಲ್ ರನ್ ಸಮಯದಲ್ಲಿಯೇ ದೇವಸ್ಥಾನದ ಹೊರಗಡೆ ಸಿಕ್ಕ ಪೌರಕಾರ್ಮಿಕರನ್ನ ಮಾತನಾಡಿಸಿ ಅವರೊಟ್ಟಿಗೆ ಫೋಟೋ ಕೂಡ ತೆಗೆಸಿಕೊಂಡರು. ಸಚಿವ ಗೋವಿಂದ ಕಾರಜೋಳ್ ಸೇರಿದಂತೆ ಹಲವು ಈ ಸಂದರ್ಭದಲ್ಲಿದ್ದರು.
PublicNext
04/03/2022 12:48 pm