ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ ಪಾಲಿಕೆಗೆ ಕಿರಿಯ ವಯಸ್ಸಿನ ಮೇಯರ್; ಮೊದಲ ಬಾರಿ ದಲಿತ ಮಹಿಳೆಗೆ ಮಣೆ

ಚೆನ್ನೈ: ಚೆನ್ನೈ ಪಾಲಿಕೆಗೆ ಕಿರಿಯ ವಯಸ್ಸಿನ, ಅಷ್ಟೇ ಅಲ್ಲದೆ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ.

ಆಡಳಿತಾರೂಢ ಡಿಎಂಕೆ ಪಕ್ಷವು ಎಂ.ಕಾಂ ಪದವೀಧರೆಯಾಗಿರುವ 28 ವರ್ಷ ವಯಸ್ಸಿನ ಆರ್‌.ಪ್ರಿಯಾ ಅವರನ್ನು ಮೇಯರ್ ಸ್ಥಾನಕ್ಕೆ ಗುರುವಾರ ಹೆಸರಿಸಿದೆ. ಡಿಎಂಕೆಯ ಮಾಜಿ ಶಾಸಕ ಚೆಂಗೈ ಶಿವಂ ಅವರ ಮೊಮ್ಮಗಳು ಪ್ರಿಯಾ. ಅವರ ತಂದೆ ಆರ್‌.ರಾಜನ್‌ ಸಹ ಡಿಎಂಕೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾರ್ಪೊರೇಷನ್ ಚುನಾವಣೆಯಲ್ಲಿ ಪ್ರಿಯಾ 74ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ.

ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ (ಜಿಸಿಸಿ) ಮೇಯರ್ ಸ್ಥಾನಕ್ಕೆ ಶುಕ್ರವಾರ (ಮಾ.4)ರಂದು ಪರೋಕ್ಷವಾಗಿ ಚುನಾವಣೆ ನಡೆಯಲಿದೆ. ಚೆನ್ನೈನ ಒಟ್ಟು 200 ವಾರ್ಡ್‌ಗಳ ಪೈಕಿ ಡಿಎಂಕೆ 153 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವುದರಿಂದ ಪಕ್ಷ ಸೂಚಿಸಿರುವಂತೆ ಪ್ರಿಯಾ ಅವರೇ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ.

ಆರ್‌.ಪ್ರಿಯಾ ಅವರು ಚೆನ್ನೈ ಕಾರ್ಪೊರೇಷನ್ ಮೇಯರ್‌ ಸ್ಥಾನಕ್ಕೇರಲಿರುವ ಮೂರನೇ ಮಹಿಳೆ. ಈ ಹಿಂದೆ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ಅವರು ಮೇಯರ್ ಆಗಿ ಅಧಿಕಾರ ನಿರ್ವಹಿಸಿದ್ದರು.

Edited By : Vijay Kumar
PublicNext

PublicNext

03/03/2022 09:20 pm

Cinque Terre

39.31 K

Cinque Terre

1

ಸಂಬಂಧಿತ ಸುದ್ದಿ