ಶಿವಮೊಗ್ಗ:ಬಜರಂಗ ದಳದ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಭಾನುವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹರ್ಷ ಮನೆಗೆ ಭೇಟಿಕೊಡುತ್ತಿದ್ದಾರೆ. ಆಗಲೇ ಹರ್ಷನ ಕುಟುಂಬಕ್ಕೆ ಬಿಎಸ್‌ವೈ ಪರಿಹಾರದ ಚೆಕ್ ಹಸ್ತಾಂತರಿಸಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
2015 ರಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿಗೂ 18 ಲಕ್ಷ ಪರಿಹಾರವನ್ನ ಅವರ ಎರಡನೇ ಹೆಂಡತಿ ಮತ್ತು ತಾಯಿಗೆ ಹಸ್ತಾಂತರಿಸಲಾಗಿತ್ತು.ಆದರೆ ಈಗ ವಿಶ್ವನಾಥ್ ತಾಯಿ ಜೊತೆಗೆ ಅವರ ಹೆಂಡ್ತಿ ಇಲ್ಲ. ಬಿಟ್ಟು ಹೋಗಿದ್ದಾರೆ. ಈ ವೇಳೆನೆ ಕಾಂಗ್ರೆಸ್ ಈ ಕುಟುಂಬಕ್ಕೆ ಸಾಂತ್ವನ ಹೇಳ್ತಿರೋದು ಅಚ್ಚರಿ ಮೂಡಿಸುತ್ತಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.
PublicNext
03/03/2022 06:08 pm