ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮೃತ ನವೀನ್ ಮನೆಗೆ ಸಚಿವ ಹೆಬ್ಬಾರ್ ಭೇಟಿ: ರಷ್ಯಾದ ನಡೆಗೆ ಬೇಸರ

ಹಾವೇರಿ: ಉಕ್ರೇನ್‌ನಲ್ಲಿ ರಷ್ಯಾದ ಶೆಲ್ ಬಾಂಬ್ ದಾಳಿಯಿಂದ ಮೃತಪಟ್ಟಿರುವ ಹಾವೇರಿಯ ಚಳಗೇರಿಯ ನವೀನ್ ಗ್ಯಾನಗೌಡ್ರ ಮನೆಗೆ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಾಂತ್ವನ ಹೇಳಲು ನಮ್ಮ ಕಡೆಗೆ ಪದಗಳು ಉಳಿದಿಲ್ಲ. ಸೈನಿಕನಾಗಿ ಮಡಿದಿದ್ದರೇ ಗೌರವದಿಂದ ನಡೆದುಕೊಳ್ಳುತ್ತಿದ್ದೆವು. ಉಕ್ರೇನ್ ಮೇಲೆ ರಷ್ಯಾ ನಡೆಸಿದ ಸೇಡಿನ ದಾಳಿಯಿಂದ ನವೀನ್ ಮೃತಪಟ್ಟಿದ್ದನ್ನು ಹೇಳಲು ಸಂಕಟ ಆಗುತ್ತದೆ ಎಂದರು.

ಈ ರೀತಿ ಪ್ರತಿಭೆಗಳನ್ನು ವಿದೇಶದಲ್ಲಿ ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ. ನಮ್ಮ ವ್ಯವಸ್ಥೆ ಬಗ್ಗೆ ಪೋಷಕರ ಹೇಳಿಕೆಗೆ ನಾನು ಸಹ ಸಹಮತ ನೀಡುತ್ತೇನೆ. ಭಾರತದ ರಾಯಭಾರಿ ವೈಫಲ್ಯದ ಬಗ್ಗೆ ಅನೇಕ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎಲ್ಲಾ ಬಾರ್ಡರ್‌ಗಳಲ್ಲಿ ಕೇಂದ್ರ ಸರ್ಕಾರ ಈಗ ರಾಯಭಾರಿ ಕಚೇರಿ ಮಾಡಿದೆ. ರಷ್ಯಾ ಮೊದಲೇ ಬಾಂಬ್ ಬ್ಲಾಸ್ಟ್ ಬಗ್ಗೆ ಮಾಹಿತಿ ನೀಡಬೇಕು. ಈ ರೀತಿ ಮಾಡುವುದು ಅಕ್ಷಮ್ಯ ಅಪರಾಧ ದೋಷ ಹುಟ್ಟಿ ಬಹಳ ದಿನ ಆಗಿದೆ. ಎಲ್ಲವನ್ನೂ ಬದಲಾವಣೆ ಮಾಡುವ ಅವಶ್ಯಕತೆ ಇದೆ ಎಂದು ಹೆಬ್ಬಾರ್ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

02/03/2022 11:37 am

Cinque Terre

38.22 K

Cinque Terre

2

ಸಂಬಂಧಿತ ಸುದ್ದಿ