ಯಾದಗಿರಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿಎಂ: ಶಾಸಕ ರಾಜುಗೌಡ ಹೇಳಿಕೆ.!
ಮಾರ್ಚ್ 19ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಪೂಜೆ ಮಾಡಲಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ ಅವರು ಹೇಳಿದರು.
ಇಂದು ಸುರಪುರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಸೇರಿದಂತೆ ಕಂದಾಯ ಇಲಾಖೆ ಸಂಭಂದಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣ ನಿವಾರಿಸಲಾಗುವುದು ಎಂದರು.
ಇನ್ನು ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ವಿದ್ಯುತ್ ನೀಡಿ ಕತ್ತಲು ಮುಕ್ತ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಹೊಸದಾಗಿ ವಿದ್ಯುತ್ ಸ್ಟೇಷನ್ ಗಳು ನಿರ್ಮಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಈಗಾಗಲೇ 6 ವಿದ್ಯುತ್ ಸರಬರಾಜು ಶೇಖರಣಾ ಘಟಕವಿದ್ದು, ಹೊಸದಾಗಿ ದೇವಾಪುರ, ಕಕ್ಕೇರಿ, ಕೊನಾಳ ಹಾಗೂ ಹುಣಸಗಿ ತಾಲ್ಲೂಕಿನ ಕನ್ನೆಳ್ಳಿ, ಕೊಡೇಕಲ್,ನಾರಾಯಣಪುರ ಮತ್ತು ಗೆದ್ದಲಮರಿ ಗ್ರಾಮದಲ್ಲಿ ಸಬ್ ಸ್ಟೇಷನ್ ನಿರ್ಮಿಸಲಾಗುತ್ತದೆ ಎಂದರು.
ಇನ್ನು ಬೆಳಕು ಯೋಜನೆಯಲ್ಲಿ 186 ದೊಡ್ಡಿಗಳಿಗೆ ಹಾಗೂ ತೋಟದ ಮನೆ ಯೋಜನೆಯಲ್ಲಿ 600ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
02/03/2022 08:50 am