ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡಿ.ಕೆ ಸಹೋದರರ ಮೇಲೆ ಸತತ ವಾಗ್ದಾಳಿ ನಡೆಸುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತೊಮ್ಮೆ ಸಿಡಿಮಿಡಿಗೊಂಡಿದ್ದಾರೆ. 'ಭಾರತದ ವಿದೇಶಾಂಗ ನೀತಿ ವಿಫಲವಾಗಿದೆ' ಎಂದು ಸಂಸದ ಡಿ.ಕೆ ಸುರೇಶ್ ಟೀಕಿಸಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಎಂ.ಪಿ ರೇಣುಕಾಚಾರ್ಯ, 'ವಿದೇಶಾಂಗ ನೀತಿ ಅಂದ್ರೆ ಸ್ಟೇಜ್ ಮೇಲೆ ಗೂಂಡಾಗಿರಿ ಮಾಡಿದಂತಲ್ಲ ಡಿ.ಕೆ ಸುರೇಶ್ ಅವರೇ' ಎನ್ನುವ ಮೂಲಕ ಕುಟುಕಿದ್ದಾರೆ.
ಎಂ.ಪಿ ರೇಣುಕಾಚಾರ್ಯ ಅವರ ಟ್ವೀಟ್ ಹೀಗಿದೆ...
"ವಿದೇಶಾಂಗ ನೀತಿ ಎಂದರೆ ವೇದಿಕೆ ಮೇಲೆ ಗೂಂಡಾಗಿರಿ ಮಾಡಿದಂತಲ್ಲ ಡಿ ಕೆ ಸುರೇಶ್ ಅವರೇ'..ಯಾವ ರಾಷ್ಟ್ರ ಭಾರತದ ವಿರುದ್ಧ ವಿರೋಧದ ನಿಲುವನ್ನು ವ್ಯಕ್ತಪಡಿಸುತ್ತಿತ್ತೋ ಇಂದು ಅದೇ ರಾಷ್ಟ್ರ ಭಾರತದ ಸಹಾಯ ಕೇಳುತ್ತಿದೆ."
ಹೀಗೆ ಟ್ವೀಟ್ ಮಾಡಿದ ರೇಣುಕಾಚಾರ್ಯ, ಡಿ.ಕೆ ಸುರೇಶ್ ಅವರ ಮೇಲೆ ಹರಿಹಾಯ್ದಿದ್ದಾರೆ.
PublicNext
27/02/2022 09:22 am