ಬೆಂಗಳೂರು: ಕಾಂಗ್ರೆಸ್ ನಾಯಕರು ಯಾವ ಉದ್ದೇಶಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆಂಬುದು ಜನರಿಗೆ ಗೊತ್ತಿದೆ. ತಮ್ಮ ರಾಜಕೀಯಕ್ಕೆ ವಿಧಾನಮಂಡಲ ಕಲಾಪದ ವೇಳೆ ಹಾಳು ಮಾಡಿದರು.ಈಗ ಸದನದ ಹೊರಗೂ ಅದನ್ನೇ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.
ಮೇಕೆದಾಟು ಯೋಜನೆಗಾಗಿ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಮೊದಲು ಪಾದಯಾತ್ರೆ–1 ಮಾಡಿದರು. ಈಗ ಪಾದಯಾತ್ರೆ–2 ಹಮ್ಮಿಕೊಂಡಿದ್ದಾರೆ’ ಎಂದರು. ಕಾಂಗ್ರೆಸ್ ಮುಖಂಡರಿಗೆ ರಾಜಕೀಯವೇ ಮುಖ್ಯ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳು ಈಗಲೂ ಜಾರಿಯಲ್ಲಿವೆ. ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದಿದ್ದಾರೆ.
PublicNext
27/02/2022 07:52 am