ವಿಜಯಪುರ : ಭಜರಂಗ ದಳ ಕಾರ್ಯಕರ್ತ ಹರ್ಷಾ ಹತ್ಯೆ ವಿರೋಧಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇನ್ನು ಪ್ರತಿಭಟನೆಯಲ್ಲಿ ಲೈಸನ್ಸ್ ಗನ್ ಸಮೇತ ಹಿಂದೂ ಮುಖಂಡರು ಪಾಲ್ಗೊಂಡಿದ್ದಾರೆ.
ರಾಘವ ಅಣ್ಣಿಗೇರಿ ಗನ್ ಸಮೇತ ಪ್ರತಿಭಟನೆ ಬಂದ ಹಿಂದೂ ಮುಖಂಡನಾಗಿದ್ದು ಸೊಂಟದಲ್ಲಿ ಪಿಸ್ತೂಲು ಹಾಕಿಕೊಂಡು ಪ್ರತಿಭಟನೆಯಲ್ಲಿ ಆಕ್ರೋಶಭರಿತ ಘೋಷನೆ ಕೂಗುತ್ತಿದ್ದಾರೆ.
ಇನ್ನು ಜೀವ ಬೆದರಿಕೆ ಹಿನ್ನೆಲೆಯಲ್ಲಿ ಲೈಸನ್ಸ್ ಗನ್ ಸಮೇತ ರಾಘವ ಅಣ್ಣಿಗೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಉಗ್ರಗಾಮಿಗಳ ಹಿಟ್ ಲಿಸ್ಟ್ ನಲ್ಲಿರೋ ವಿಜಯಪುರ ಜಿಲ್ಲೆಯ ಕೆಲವರಲ್ಲಿ ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಕೂಡಾ ಒಬ್ಬರಾಗಿದ್ದಾರೆ ಹಾಗಾಗಿ ಗನ್ ಸಮೇತವೇ ಪ್ರತಿಭಟನೆಯಲ್ಲಿ ಹಾಜರಾಗಿದ್ದಾರೆ.
PublicNext
23/02/2022 01:49 pm