ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2ನೇ ದಿನವೂ ಕಾಂಗ್ರೆಸ್‌ನಿಂದ ಸದನದಲ್ಲಿ ಅಹೋರಾತ್ರಿ ಧರಣಿ: ಕ್ರಿಕೆಟ್ ಪಂದ್ಯ ವೀಕ್ಷಿಸಿದ ಶಾಸಕರು

ಬೆಂಗಳೂರು: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆಂಬ ಕಾರಣಕ್ಕೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಸದನದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆಯಿತು. ಧರಣಿನಿರತ ಎಲ್ಲ ಸದಸ್ಯರಿಗೆ ವಿಧಾನಸೌಧದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.

ಧರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಹಲವು ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದವರ ಮೊಗಸಾಲೆಯಲ್ಲಿ ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದಾರೆ. ವಿಜಯನಗರದ ಖಾಸಗಿ ಹೋಟೆಲ್‌ನಿಂದ ರಾತ್ರಿ ಊಟ ಬಂದಿದ್ದು, ಸ್ಪೀಕರ್ ಸಚಿವಾಲಯದಿಂದ ವೆಜ್ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಊಟ ಮಾಡಿದ ಕಾಂಗ್ರೆಸ್ ಶಾಸಕರು ಸದನದಲ್ಲೇ ಮಲಗಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮಲಗಲು ಬೆಡ್, ತಲೆ ದಿಂಬುಗಳು ಹಾಗೂ ಹೊದಿಕೆ ವ್ಯವಸ್ಥೆ ಮಾಡಲಾಗಿತ್ತು.

ಈಶ್ವರಪ್ಪ ವಿರುದ್ಧ ಡಿ.ಜಿ ಯಾಕೆ ಇದುವರೆಗೆ ಕೇಸು ದಾಖಲಿಸಿಲ್ಲ..? ಕುಮಾರಸ್ವಾಮಿಯವರು ನಮ್ಮನ್ನು ಟೀಕಿಸೋ ಬದಲು ಇಲ್ಲಿ ಬಂದು ಅಹೋರಾತ್ರಿ ಧರಣಿ ಮಾಡಲಿ. ಸೋಮವಾರದಿಂದ ಪ್ರತಿ ತಾಲೂಕುಗಳಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ರ್ಯಾಲಿ ನಡೆಸುತ್ತೇವೆ. ತಹಸೀಲ್ದಾರರಿಗೆ ಮನವಿ ಕೊಟ್ಟು ರಾಜ್ಯಪಾಲರಿಗೆ ತಲುಪಿಸುತ್ತೇವೆ ಎಂದು ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

19/02/2022 07:58 am

Cinque Terre

20.51 K

Cinque Terre

7

ಸಂಬಂಧಿತ ಸುದ್ದಿ