ಇಂಪಾಲ್: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಣಿಪುರದ ಕಬುಯಿ ಬುಡಕಟ್ಟಿನ ಕಲಾವಿದರೊಂದಿಗೆ ವಾಂಗ್‌ಖೈ ಮಂಡಲದಲ್ಲಿ ಶುಕ್ರವಾರ ನೃತ್ಯ ಮಾಡಿದ್ದಾರೆ.
ಸ್ಮೃತಿ ಇರಾನಿ ಅವರು ನೃತ್ಯ ಮಾಡುತ್ತಿರುವ ವಿಡಿಯೋವನ್ನು ಬಿಜೆಪಿಯ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದಾರೆ. ಜೊತೆಗೆ, "ವಾಂಗ್‌ಖೈ ಮಂಡಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಪುಯಿ ಬುಡಕಟ್ಟು ಜನಾಂಗದವರು ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿದರು. ಇದು ಮಣಿಪುರದ ಶ್ರೀಮಂತ ಮತ್ತು ರೋಮಾಂಚಕ ಸಂಸ್ಕೃತಿಯ ಮತ್ತೊಂದು ಗಮನಾರ್ಹ ಅಭಿವ್ಯಕ್ತಿಯಾಗಿದೆ. ಇವರೊಂದಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೆಜ್ಜೆ ಹಾಕಿದರು' ಎಂದು ಬರೆದುಕೊಂಡಿದ್ದಾರೆ.
ಮಣಿಪುರ ವಿಧಾನ ಸಭೆ ಚುನಾವಣೆಯು ಇದೇ ಫೆಬ್ರವರಿ 28ರಿಂದ ಮಾರ್ಚ್ 5ರವರೆಗೆ ನಡೆದಯಲಿದೆ. ಮಣಿಪುರ ವಿಧಾನ ಸಭೆಯ ಒಟ್ಟು 60 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಅವರು ಸಂಬಿತ್ ಪಾತ್ರ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಪರ ಪ್ರಚಾರ ನಡೆಸಿದ್ದಾರೆ.
PublicNext
18/02/2022 11:20 pm