ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ತಂದೆ ಬಗ್ಗೆ ನನಗೆ ಗೌರವ ಇದೆ: ಕೆ.ಎಸ್.ಈಶ್ವರಪ್ಪ

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿಂದು ಭಾರಿ ಕೋಲಾಹಲವೇ ನಡೆದು ಹೋಗಿದೆ. ಬಿಜೆಪಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ನುಗ್ಗಿ ಹೋಗಿರೋದು ಇವತ್ತು ಭಾರಿ ಚರ್ಚೆಗೂ ಗ್ರಾಸವಾಗಿದೆ. ಇದಾದ ಬಳಿಕವೇ ಈಶ್ವರಪ್ಪ ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದ್ದಾರೆ ಬನ್ನಿ, ನೋಡೋಣ.

ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್ ಫೈಟ್ ಇವತ್ತನ ಹಾಟ್ ಟಾಪಿಕೇ ಆಗಿತ್ತು. ವಿಧಾನ ಮಂಡಲದ ಅಧಿವೇಶನದಲ್ಲಿಯೇ ಡಿಕೆ ಶಿ ಹಾಗೂ ಈಶ್ವರಪ್ಪನವರ ಮಾತು ತಾರಕಕ್ಕೇರಿತ್ತು. ಆಗಲೇ ಈಶ್ವರಪ್ಪನವರು ಡಿಕೆಶಿ ಅವರ ತಂದೆ ಬಗ್ಗೆ ಆಡು ಭಾಷೆಯಲ್ಲಿಯೇ ಮಾತನಾಡಿದ್ದರು. ಅದಕ್ಕೇನೆ ಡಿಕೆ ಶಿವಕುಮಾರ್ ಗರಂಗ ಆಗಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನರು ಮಾತನಾಡಿದ್ದಾರೆ. ನನಗೆ ಅವರ ತಂದೆ ಬಗ್ಗೆ ಗೌರವ ಇದೆ. ನಾನು ಆಡು ಭಾಷೆಯಲ್ಲಿಯೇ ಮಾತನಾಡಿರೋ ಹೊರತು ಉದ್ದೇಶ ಪೂರ್ವಕವಾಗಿಯೇ ಏನೂ ಕೆಟ್ಟದಾಗಿ ಮಾತನಾಡಿಲ್ಲ ಅಂತಲೇ ಹೇಳಿದ್ದಾರೆ ಈಶ್ವರಪ್ಪ.

Edited By : Shivu K
PublicNext

PublicNext

16/02/2022 10:20 pm

Cinque Terre

87.27 K

Cinque Terre

30

ಸಂಬಂಧಿತ ಸುದ್ದಿ