AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮುಸ್ಲಿಂ ಅಲ್ಲವೇ ಅಲ್ಲ. ಓವೈಸಿ ಒಬ್ಬ ರಾಮನ ವಂಶಸ್ಥರಾಗಿದ್ದಾರೆ. ಹೀಗಂತ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಭಾರಿ ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಓವೈಸಿ ನನ್ನ ಹಳೆಯ ಸ್ನೇಹಿತ. ನನಗೆ ತಿಳಿದಿರುವಂತೆ ಆತ ಕ್ಷತ್ರಿಯ (ಹಿಂದೂ) ಅಷ್ಟೇ ಅಲ್ಲ ಭಗವಾನ್ ರಾಮನ ವಂಶಸ್ಥರು. ಇರಾನ್‌ಗೆ ಸೇರಿದ ವ್ಯಕ್ತಿ ಅಲ್ಲವೇ ಅಲ್ಲ ಅಂತಲೂ ಹೇಳಿ ಬಿಟ್ಟಿದ್ದಾರೆ.
ತಮ್ಮ ಪುತ್ರ ಹಾಗೂ ಗೂಂಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆನೆ ಬ್ರಿಜ್ ಭೂಷನ್ ಶರಣ್ ಸಿಂಗ್ ಹೀಗೆ ಹೇಳಿಕೆ ನೀಡಿದ್ದಾರೆ.
PublicNext
15/02/2022 06:24 pm