ಲಕ್ನೋ: ನಾವು ಸಂವಿಧಾನ ಹೇಳಿದಂತೆ ಕೇಳುತ್ತೇವೆಯೇ ಇಸ್ಲಾಂ ಕಾನೂನಿನಂತಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ದೇಶಾದ್ಯಂತ ಸುದ್ದಿಯಾಗಿರುವ ಹಿಜಾಬ್ ವಿವಾದ ಕುರಿತಂತೆ ಮಾತನಾಡಿರುವ ಅವರು, ಇಸ್ಲಾಂ ನೀತಿ-ನಿಯಮಗಳು ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ನಾವು ಸಂವಿಧಾನದ ಪರ ನಡೆಯುತ್ತೇವೆ ಹೊರತು ಇಸ್ಲಾಂ ಕಾನೂನುಗಳ ಪರವಾಗಿ ಅಲ್ಲ. ಮುಸ್ಲಿಂ ಮಹಿಳೆಯರಿಗೆ ಮಾರಕವಾಗಿದ್ದ ತ್ರಿವಳಿ ತಲಾಖ್ ತೆಗೆದುಹಾಕಿದ್ದು ನಮ್ಮ ಸರ್ಕಾರ. ನಾವು ದೇಶದ ಎಲ್ಲ ಮಹಿಳೆಯರನ್ನು ಗೌರವಿಸುತ್ತೇವೆ. ಸಂವಿಧಾನ ಏನನ್ನು ಹೇಳಿದೆಯೋ ಆ ಪ್ರಕಾರವೇ ನಡೆದುಕೊಳ್ಳುತ್ತಿದ್ದೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
PublicNext
15/02/2022 07:46 am