ಮೈಸೂರು:ಉಳ್ಳಾಲದ ಮುಲ್ಲಾ ಈ ಯು.ಟಿ.ಖಾದರ್ ನಿಜವಾದ ಮೂರ್ಖ. ಮಸೂರಿನ ಬಗ್ಗೆ ಗೊತ್ತಿಲ್ಲ. ಮೈಸೂರಿನ ಇತಿಹಾಸವೂ ತಿಳಿದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಯು.ಟಿ.ಖಾದರ್ ಈ ಹಿಂದೆ ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಅಂತಲೇ ಕೇಳಿದ್ದರು. ಅದಕ್ಕೆ ತಿರುಗೇಟು ನೀಡಿರೋ ಪ್ರತಾಪ್ ಸಿಂಹ, ಯು.ಟಿ.ಖಾದರ್ ಅವರಿಗೆ ಮೈಸೂರಿನ ಇತಿಹಾಸದ ಪಾಠವನ್ನೇ ಈಗ ಮಾಡಿ ಬಿಟ್ಟಿದ್ದಾರೆ.
ನಿಜಕ್ಕೂ ಯು.ಟಿ.ಖಾದರ್ ಮೂರ್ಖತನ ಪ್ರದರ್ಶನ ಮಾಡುತ್ತಿದ್ದಾರೆ. ಕೋರ್ಟ್ ಆದೇಶ ಬರೋವರೆಗೂ ಕಾಯಬೇಕು ಅನ್ನೋದು ತಿಳಿದಿಲ್ಲ ಅಂತಲೇ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಇಂದು ಹಿಜಾಬ್ ಕೇಳ್ತಾರೆ. ನಾಳೆ ಬುರ್ಖಾನೆ ಬೇಕು ಅಂತಾರೆ. ಅಲ್ಲಿಗೆ ಎಲ್ಲಿ ಹೋಗಿ ಬಿಡುತ್ತದೆ ಸಮವಸ್ತ್ರದ ಕಥೆ. ಹೀಗೆ ಆದರೆ ದೇಶವನ್ನೇ ಇವ್ರು ತುಂಡು-ತುಂಡಾಗಿ ಮಾಡಿ ಬಿಡ್ತಾರೆ ಅಂತಲೂ ಪ್ರತಾಪ್ ಸಿಂಹ ಆತಂಕ ಪಟ್ಟಿದ್ದಾರೆ.
PublicNext
14/02/2022 12:55 pm