ಕೊಪ್ಪಳ: 'ಏಯ್, ನೀವೆಲ್ಲ ಹೊಟ್ಟೆಗೆ ಏನು ಊಟ ಮಾಡ್ತೀರಿ? ಸರಿಯಾಗಿ ಕೆಲಸ ಮಾಡಲಿಕ್ಕೆ ಆಗೋದಿಲ್ವಾ? ಕಟ್ಟಡದ ಪಾಯ ಎತ್ತರಕ್ಕೆ ನಿರ್ಮಿಸದಿದ್ದರೆ ಮಳೆ ನೀರು ಒಳಗೆ ಹೋಗುತ್ತೆ ಅನ್ನೋದು ನಿಮಗೆ ಅರ್ಥ ಆಗಲ್ವಾ? ಇದನ್ನೆಲ್ಲ ಕಿತ್ತು ಸರಿ ಮಾಡದೇ ಇದ್ದರೆ ನಿಮ್ಮನ್ನೆಲ್ಲ ಸಸ್ಪೆಂಡ್ ಮಾಡಿ ಬಿಸಾಕ್ತೀನಿ...'
ಹೀಗಂತ ಸಚಿವ ಹಾಲಪ್ಪ ಆಚಾರ್ ಅವರು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಅಧಿಕಾರಿ ಮೇಲೆ ಗರಂ ಆಗಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ವೇಳೆ ಸಚಿವ ಹಾಲಪ್ಪ ಇಂಜಿನಿಯರ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ತರಗತಿಗಳನ್ನು ಎತ್ತರಕ್ಕೆ ಕಟ್ಟದಿರುವ ಹಿನ್ನಲೆಯಲ್ಲಿ ಇಂಜನಿಯರ್‌ಗೆ ಕ್ಲಾಸ್ ತೆಗೆದುಕೊಂಡ ಹಾಲಪ್ಪ ಆಚಾರ್, ಇಂತಹ ಅಡ್ನಾಡಿ ಇಂಜನಿಯರ್‌ಗಳು ಸಿಕ್ಕಿರುವುದು ನಮ್ಮ ಕರ್ಮ. ಎಲ್ಲಾದ್ರೂ ದನಕಾಯಲು ಹೋಗು. ಹರಾಮಿ ಪಗಾರ ತಿಂತೀರಿ, ಇಷ್ಟು ಕೆಲಸ ಮಾಡಲು ಆಗೋದಿಲ್ವಾ ನಿಮಗೆ? ಮಳೆ ಬಂದರೆ ನೀರು ಕ್ಲಾಸ್ ರೂಂ ಒಳಗೆ ನುಗ್ಗುತ್ತೆ. ಇಂತಹ ಅಡ್ನಾಡಿಗಳು ಸೇರಿಕೊಂಡಿರುವುದರಿಂದ ರಾಜ್ಯ ಹಾಳಾಗಿದೆ. ಇಂತಹ ಕೊಠಡಿಯಲ್ಲಿ ಕುಳಿತುಕೊಳ್ಳಲು ಆ ಹುಡುಗರು ಏನು ಪಾಪ ಮಾಡಿವೆ? ಇದನ್ನೆಲ್ಲ ಕಿತ್ತು ಸರಿ ಮಾಡದಿದ್ದರೆ ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಬೇಕಾಗುತ್ತೆ ಎಂದ ಸಚಿವ ಹಾಲಪ್ಪ ಆಚಾರ್ ಇಂಜಿನಿಯರ್‌ಗೆ ಎಚ್ಚರಿಕೆ ನೀಡಿದ್ದಾರೆ.
PublicNext
14/02/2022 11:59 am