ಮೈಸೂರು: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ದಿ ನ್ಯೂ ಇಂಡಿಯನ್ ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಅಯೂಬ್ ಖಾನ್‌ರನ್ನ ಪೊಲೀಸರು ಬಂಧಿಸಿದ್ದಾರೆ.
ಈ ಒಂದು ಹೇಳಿಕೆಯಿಂದ ಜೈನ ಸಮಾಜ ಬೇಸರಗೊಂಡಿದೆ. ಅದಕ್ಕೇನೆ ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲ್ಲೆಯಲ್ಲಿಯೇ ಪೊಲೀಸರು 295 ಎ ಅಡಿ ಅಯೂಬ್ ಖಾನ್‌ನನ್ನ ಬಂಧಿಸಿದ್ದಾರೆ. ಮೈಸೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲದ ಮುಂದೇನೂ ಹಾಜರು ಪಡಿಸಿದ್ದಾರೆ. ಸದ್ಯ ಅಯೂಬ್ ಖಾನ್, ಫೆಬ್ರವರಿ-25 ವರೆಗೂ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
PublicNext
14/02/2022 09:24 am