ದಾವಣಗೆರೆ: 'ಇವರಿಗೆ ರಾಮ್ ಮಂದಿರ ಆಯಿತು, ಗೋ ಹತ್ಯೆ ಆಯಿತು. ಈಗ ಹಿಜಾಬ್ ವಿಚಾರವಾಗಿ ವಿವಾದ ಎಬ್ಬಿಸಿದ್ದಾರೆ. ಹಿಜಾಬ್ ಎಂಬುದರ ಅರ್ಥವೇ ಬಿಜೆಪಿಗೆ ಗೊತ್ತಿಲ್ಲ. ತಲೆ ಮೇಲೆ ಹಾಕಿಕೊಳ್ಳುವ ಸೆರಗು ಹಿಜಾಬ್ ಎನ್ನುತ್ತೇವೆ. ನನ್ನ ತಾಯಿ ಸರಸ್ವತಿ, ಲಕ್ಷ್ಮೀ ಸೇರಿದಂತೆ ಹೆಣ್ಣು ದೇವರುಗಳು ಕೂಡ ಸೆರಗು ಹಾಕಿಕೊಂಡಿದ್ದರು. ಆ ಮೂಲಕ ಮೈಮುಚ್ಚುವುದೇ ಮಹಿಳೆಯರಿಗೆ ಲಕ್ಷಣ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರವಾಡಿ ಮಹಿಳೆಯರು ಮುಖದ ತುಂಬ ಸೆರಗು ಹೊತ್ತುಕೊಳ್ಳುತ್ತಾರೆ. ಅವರೇನು ಮುಸ್ಲಿಂ ಅಲ್ಲ. ಹಾಗಂತ ಅದನ್ನ ತೆಗೆಯಿರಿ ಅಂತ ಹೇಳೋಕೆ ಆಗುತ್ತಾ? ಇಂದಿರಾಗಾಂಧಿ, ಪ್ರತಿಭಾ ಪಾಟೀಲ್ ಕೂಡ ಸೆರಗು ಹಾಕಿಕೊಳ್ಳುತ್ತಿದ್ದರು. ಇಳಕಲ್ ಸೀರೆ 16 ಮೊಳ ಇರುತ್ತಿದ್ದವು. ಮೈ ಮುಚ್ಚುವುದು ಮಹಿಳೆಯರಿಗೆ ಲಕ್ಷಣ. ಇದು ತಪ್ಪು ಎನ್ನುವುದಾದರೆ ಸಮವಸ್ತ್ರ ಮಾಡಲಿ. ಅಷ್ಟಕ್ಕೂ ಮಕ್ಕಳು ಹೆಗಲ ಮೇಲೆ ವೇಲ್ ಹಾಕಿಕೊಳ್ತಾರೆ. ಅದನ್ನೇ ತಲೆ ಮೇಲೆ ಹಾಕಿಕೊಂಡರೆ ಇವರಿಗೇನು ಕಷ್ಟ? ಎಂದು ಸಿ.ಎಂ ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.
PublicNext
13/02/2022 09:00 pm