ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕಾರಣಿಗಳು ಸೂಕ್ಷ್ಮ ವಿಚಾರಗಳ ಬಗ್ಗೆ ಯೋಚಿಸಿ ಮಾತಾಡಬೇಕು: ಸುಮಲತಾ

ಮಂಡ್ಯ: ರಾಜಕಾರಣಿಗಳು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಸದ್ಯ ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನಾನು ಏನನ್ನೂ ಹೇಳೋದಿಲ್ಲ. ಈಗಾಗಲೇ ಹಿಜಾಬ್ ವಿವಾದ ಕುರಿತಂತೆ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಪೆಟ್ರೋಲ್ ಹಾಕಿ ಮತ್ತಷ್ಟು ಬೆಂಕಿ ಉರಿಸುವ ಕೆಲಸ ಆಗಬಾರದು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಕಾನ್ ಎಂಬ ವಿದ್ಯಾರ್ಥಿನಿಯನ್ನು ಗುಂಪುಗಟ್ಟಿ ಬೆನ್ನಟ್ಟಿ ಹೋಗಿದ್ದು ಸರಿಯಲ್ಲ. ಇದು ಪ್ರಪಂಚದಲ್ಲಿ ತಪ್ಪಾದ ರೀತಿ ಬಿಂಬಿತವಾಗುತ್ತಿದೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

13/02/2022 08:25 pm

Cinque Terre

33.39 K

Cinque Terre

5

ಸಂಬಂಧಿತ ಸುದ್ದಿ