ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯ ಮಾರಾಟ ವಿರುದ್ಧದ ಅಣ್ಣಾ ಹಜಾರೆ ಹೋರಾಟ ರದ್ದು

ಮುಂಬೈ: ವಾಕ್-ಇನ್ ಸ್ಟೋರ್ ಹಾಗೂ ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಖಂಡಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉಪವಾಸ ಹೋರಾಟ ನಡೆಸೋದಾಗಿ ಹೇಳಿದ್ದರು. ಫೆಬ್ರವರಿ 14ರಂದು ಹೋರಾಟ ಹಮ್ಮಿಕೊಂಡಿದ್ದರು. ಸದ್ಯ ಅಣ್ಣಾ ಹಜಾರೆ ಈ ಹೋರಾಟವನ್ನು ರದ್ದುಗೊಳಿಸಿದ್ದಾರೆ‌.

ವೈನ್ ಮಾರಾಟ ನೀತಿಯನ್ನು ಮರುಪರಿಶೀಲನೆ ಮಾಡಿ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಭರವಸೆ ನೀಡಿದೆ‌. ಜನರ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ನಿರ್ಧಾರ ತಿಳಿದುಕೊಂಡು ಮುಂದಿನ ಹೋರಾಟದ ಕುರಿತು ರೂಪುರೇಷೆ ಸಿದ್ಧಪಡಿಸೋದಾಗಿ ಅಣ್ಣಾ ಹಜಾರೆ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

13/02/2022 07:48 pm

Cinque Terre

73.17 K

Cinque Terre

14

ಸಂಬಂಧಿತ ಸುದ್ದಿ