ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಹೀಗೆ ಹೇಳಿರುವುದು ನನಗೆ ಗೊತ್ತು. ಚುನಾವಣೆಯಲ್ಲಿ ಸಿದ್ದರಾಮಯ್ಯ ಜಿಟಿ ದೇವೇಗೌಡ್ರು ನಿಲ್ತಾರೆ. ಅದರ ಅರ್ಥ ರಾಜ್ಯದಲ್ಲಿ ಎಲ್ಲೂ ಬೇಕಾದ್ರೂ ನಿಲ್ಲಬಹುದು ಎಂದು ಅರ್ಥ. ಹೀಗಾಗಿ ಅವ್ರು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು. ಕುಮಾರಸ್ವಾಮಿ ರಾಮನಗರ ಜಿಲ್ಲೆ ಬಿಟ್ಟು ಯಾವ ಜಿಲ್ಲೆಗೆ ಹೋಗಲ್ಲ ಅಂತ ದೇವೇಗೌಡರು ಖಡಕ್ ಆಗಿ ಹೇಳಿದ್ರು. ಮಾತಿನ ವೇಳೆ ಈ ರೀತಿಯ ಹೇಳಿಕೆ ಬರೋದು ಸಾಮಾನ್ಯ ಅಂತಾ ದೇವೇಗೌಡರು ಹೇಳಿದರು.
PublicNext
12/02/2022 06:53 pm