ಬೆಂಗಳೂರು: ಚುನಾವಣಾ ಸುಧಾರಣೆ ಸಂಬಂಧಿಸಿದತೆ ಚರ್ಚೆ ನಡೆಸುವ ವಿಚಾರವಾಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕರಾಗಿದ್ದಾರೆ. ನಮ್ಮ ಬದುಕಿಗೆ ಸಾರ್ಥಕತೆಯ ಭಾವವೇ ಇಲ್ಲದಂತಾಗಿದೆ. ನಮ್ಮನ್ನು ನಾವು ಸೀಮಿತವಾದ ಚೌಕಟ್ಟಿನಲ್ಲಿ ಕಟ್ಟಿ ಹಾಕಿಕೊಂಡಿದ್ದೇವೆ ಎಂದ ಅವರು ಕಣ್ಣೀರಿಟ್ಟಿದ್ದಾರೆ.
ನಾವು ಸೃಷ್ಟಿಯ ಸತ್ಯ ಅರಿತುಕೊಳ್ಳಬೇಕಾಗಿದೆ. ಬ್ರಿಟೀಷ್ ಶಿಕ್ಷಣ ಪದ್ದತಿಯಿಂದಾಗಿ ಜೀವನದ ಕಲ್ಪನೆಗಳು ಇಲ್ಲದಂತಾಗಿದೆ. ನಮ್ಮ ಬದುಕಿನ ನಂಬಿಕೆಗಳು ಹಾಗೂ ವಿಶ್ವಾಸ ಬರದೇ ಹೋದಲ್ಲಿ ವ್ಯವಸ್ಥೆ ನಡೆಸಲು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೋ ಅದನ್ನು ಸರಿಯಾಗಿ ನಡೆಸಬೇಕಾದಲ್ಲಿ ಜ್ಞಾನದ ವಿಸ್ತಾರ ಆಗಬೇಕು. ಆ ಪ್ರಯತ್ನ ನಡೆಯಬೇಕು ಎನ್ನುವಷ್ಟರಲ್ಲಿ ಭಾವುಕರಾದ ಸ್ಪೀಕರ್ ಕಣ್ಣೀರಿಟ್ಟಿದ್ದಾರೆ.
PublicNext
12/02/2022 05:53 pm