ಮೈಸೂರು: ಟಿಪ್ಪು ಎಕ್ಸ್ ಪ್ರೆಸ್ ಬದಲಿಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರಿಡಬೇಕೆಂದು ಒತ್ತಾಯಿಸಿ ಸಂಸದ ಪ್ರತಾಪ್ ಸಿಂಹ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗೆ ಮನವಿ ಮಾಡಿದ್ದಾರೆ. ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಬಹಳಷ್ಟಿದೆ ಹೀಗಾಗಿ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರಿಡುವಂತೆ ಒತ್ತಾಯಿಸಿ ಲಿಖಿತ ಮನವಿ ಸಲ್ಲಿಕೆ ಮಾಡಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಬೇಕಾದರೆ ಸಿದ್ದರಾಮಯ್ಯರವರು ಹೆಸರು ಬದಲಿಸಿಕೊಳ್ಳುತ್ತಾರೆ. ಸಿದ್ದ ರಹೀಮ್ ಅಯ್ಯ ಅಂತಾ ಹೆಸರು ಬದಲಿಸಿಕೊಳ್ಳುತ್ತಾರೆ ಎಂದು ಗುಡುಗಿದರು.
ಹಿಜಾಬ್ ಗಾಗಿ ವಿದ್ಯಾರ್ಥಿಗಳು ಯಾಕೆ ಇಷ್ಟೊಂದು ಹಠ ಹಿಡಿದಿದ್ದಾರೆ. ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು. ಎಲ್ಲರು ಕಾಲೇಜಿಗೆ ಹಿಜಾಬ್ ಗಾಗಿ ಬರುತ್ತೀದ್ದೀರಾ? ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಾಸಗೆ ಹೋಗಿ. ಮದರಸದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿ ಕೊಳ್ಳಬಹುದು ಅಂತ ಹೇಳಿದ್ದರು.
PublicNext
12/02/2022 08:01 am