ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿ ಸಿಎಂ ಯೋಗಿ ವೇಷ ತೊಟ್ಟು ಮತದಾನಕ್ಕೆ ಬಂದ ವ್ಯಕ್ತಿ; ಮುಂದೆ ಆಗಿದ್ದೇನು ಗೊತ್ತಾ?

ಲಕ್ನೋ: ಉತ್ತರ ಪ್ರದೇಶದಲ್ಲಿ ಅತ್ಯಂತ ತೀವ್ರ ಪೈಪೋಟಿಯ ನಡುವೆ ನಿನ್ನೆ (ಗುರುವಾರ) ಪಶ್ಚಿಮ ಉತ್ತರ ಪ್ರದೇಶದ ಶಾಮ್ಲಿ, ಮೀರತ್, ಹಾಪುರ್, ಮುಜಾಫರ್‍ನಗರ, ಬಾಗ್‍ಪತ್, ಗಾಜಿಯಾಬಾದ್, ಬುಲಂದ್‍ಶಹರ್, ಅಲಿಗಢ, ಆಗ್ರಾ, ಗೌತಮ್ ಬುದ್ಧ ನಗರ, ಮಥುರಾ ಸೇರಿದಂತೆ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಏಳು ಹಂತಗಳಲ್ಲಿ ಮತದಾನ ನಡೆಯಿತು.

ಮೋಯ್ಡಾ ಸೆಕ್ಟರ್ 11ರ ಮತಗಟ್ಟೆಗೆ ಬಂದ ಮತದಾರ ರಾಜು ಕೊಹ್ಲಿ ಎಂಬುವವರು ವಿಶೇಷವಾಗಿ ಮತಗಟ್ಟೆ ಬಂದು ಜನರ ಗಮನ ಸೆಳೆದರು. ರಾಜು ಕೊಹ್ಲಿ ಅವರು ಕೇಸರಿ ಬಟ್ಟೆಯನ್ನು ಧರಿಸಿ, ತಲೆಯನ್ನು ಬೋಳು ಮಾಡಿಸಿಕೊಂಡು ಸಿಎಂ ಯೋಗಿ ಆದಿತ್ಯನಾಥ್ ರೀತಿ ಡ್ರೆಸ್‌ ಮಾಡಿಕೊಂಡು ವಿಶಿಷ್ಟವಾಗಿ ಮತದಾನಕ್ಕೆ ಬಂದಿದ್ದರು. ಈ ವೇಳೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು.

Edited By : Vijay Kumar
PublicNext

PublicNext

11/02/2022 10:07 am

Cinque Terre

65.4 K

Cinque Terre

5

ಸಂಬಂಧಿತ ಸುದ್ದಿ