ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಕ್ಕೆ ಬಂದ್ರೆ ಬೈಕ್‌ನಲ್ಲಿ ಟ್ರಿಪಲ್ ರೈಡ್‌ಗೆ ಅವಕಾಶ; ಎಸ್‌ಬಿಎಸ್‌ಪಿ

ಲಕ್ನೋ: ಜನ ಪ್ರತಿನಿಧಿಗಳು ಚುನಾವಣೆ ವೇಳೆ ಜನರಿಗೆ ವಿಚಿತ್ರ ಭರವಸೆಗಳನ್ನು ನೀಡುತ್ತವೆ. ಇಂತಹದ್ದೇ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಬೈಕ್‌ನಲ್ಲಿ ಮೂವರನ್ನು ಕೂರಿಸಿಕೊಂಡು ಹೋಗಲು (ಟ್ರಿಪಲ್ ರೈಡ್‌ಗೆ) ಅವಕಾಶ ನೀಡುತ್ತೇವೆ ಎಂದು ಸಮಾಜವಾದಿ ಪಕ್ಷದ ಮಿತ್ರಪಕ್ಷ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್‌ಬಿಎಸ್‌ಪಿ) ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್, ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಜನರಿಗೆ ಬೈಕ್‌ನಲ್ಲಿ ಮೂವರು ಸಂಚರಿಸಲು ಅವಕಾಶ ಮತ್ತು ದಂಡ ವಿಧಿಸುವುದಿಲ್ಲ. ಅಲ್ಲದೆ, ಆಟೊರಿಕ್ಷಾ ಮತ್ತು ಟೆಂಪೊದಲ್ಲಿ ಕೂಡ ನಿಗದಿತ ಮಿತಿಗಿಂತ ಹೆಚ್ಚಿನ ಜನರನ್ನು ಕರೆದುಕೊಂಡು ಹೋಗಬಹುದು, ಅದಕ್ಕೆ ದಂಡ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

09/02/2022 06:43 pm

Cinque Terre

30.11 K

Cinque Terre

4

ಸಂಬಂಧಿತ ಸುದ್ದಿ