ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಹಿಂದೆ ಕಾಣದ ಕೈಗಳಿವೆ : ಹೆಚ್ ಡಿಕೆ ಸಿಡಿಮಿಡಿ

ರಾಮನಗರ : ಹಿಜಾಬ್ ನಿಂದ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಕೃಷ್ಣ ನಗರೀಯ ಕಾಲೇಜೊಂದರಲ್ಲಿ ಹುಟ್ಟಿಕೊಂಡ ಈ ಕಿಡಿ ಇಂದು ರಾಜ್ಯದಲ್ಲಿ ಜ್ವಾಲೆಯಾಗಿದೆ.

ಶಿವಮೊಗ್ಗ ಬಾಪೂಜಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆದಿದೆ. ವಿದ್ಯಾರ್ಥಿಗಳ ಕಂಟ್ರೋಲ್ ಗಾಗಿ ಪೊಲೀಸರು ಲಾಠಿ ಚಾರ್ಜ್ ಸಹ ಮಾಡಿದ್ದಾರೆ. ಹಿಜಾಬ್ ಹಿಂಸಾಚಾರಕ್ಕೆ ತಿರುಗಿರುವುದರ ಹಿಂದೆ ಕೆಲವು ಕಾಣದ ಕೈಗಳ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಮಿನಿ ವಿಧಾನಸೌಧದಲ್ಲಿ ಮಾತನಾಡಿರುವ ಅವರು ರಾಜ್ಯದಲ್ಲಿರುವ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಇವರಿಗೆ ಸಾಧ್ಯವಿಲ್ಲ, ಹಾಗಾಗಿ ಇಂತಹ ಸೂಕ್ಷ್ಮ ವಿಷಯದಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡ್ತಾರೆ. ಉಡುಪಿಯಲ್ಲಿ ಇದು ಹೇಗೆ ಪ್ರಾರಂಭವಾಯ್ತು, ಇದರ ಹಿಂದೆ ಯಾವ ಸಂಘಟನೆಗಳು ಇದ್ದಾವೆ ಎಂದು ನನಗೆ ಮಾಹಿತಿ ಇದೇ ಆ ವಿಚಾರ ಚರ್ಚೆ ಮಾಡಿದರೆ ನಾನು ಖಳನಾಯಕ ಆಗ್ತೇನೆ" ಎಂದು ಹೇಳಿದ್ದಾರೆ.

ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟ ಇದು, ಇದನ್ನ ಹಾಳು ಮಾಡಲು ಹೊರಟ್ಟಿದ್ದಾರೆ. ಬಡವರ ಪರವಾಗಿ ಹೋರಾಟ ಮಾಡಿ ಎಂದು ಎಲ್ಲಾ ಸಮಾಜದವರಿಗೂ ಹೇಳ್ತೇನೆ. ಉಡುಪಿ ಹಿಂದೂ - ಮುಸ್ಲಿಮರ ಶಕ್ತಿ ಕೇಂದ್ರ. ಏನೇ ಪ್ರಾರಂಭ ಆದರೂ ಅಲ್ಲಿಂದಲೇ. ನಾಡಿನ ಜನತೆ, ಯುವಕರು ಅರ್ಥ ಮಾಡಿಕೊಳ್ಳಬೇಕು " ಎಂದು ಎಚ್ಡಿಕೆ ಹೇಳಿದ್ದಾರೆ.

Edited By : Nirmala Aralikatti
PublicNext

PublicNext

08/02/2022 10:54 pm

Cinque Terre

40.07 K

Cinque Terre

6

ಸಂಬಂಧಿತ ಸುದ್ದಿ