ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಇಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಹಲವು ಚುನಾವಣೆಗಳಲ್ಲಿ ಸೋತ ಬಳಿಕವೂ ನಿಮ್ಮ (ಕಾಂಗ್ರೆಸ್) 'ಅಹಂಕಾರ'ದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದು ದೇಶದ ಬಡ ಜನರು ಗ್ಯಾಸ್ ಸೇರಿದಂತೆ ಹಲವು ರೀತಿಯ ಮೂಲಸೌಕರ್ಯ ಸಂಪರ್ಕ ಪಡೆಯುತ್ತಿದ್ದಾರೆ. ಮನೆ ಮತ್ತು ಶೌಚಾಲಯಗಳನ್ನು ಪಡೆಯುತ್ತಿದ್ದಾರೆ. ತಮ್ಮದೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆದರೆ ದುರದೃಷ್ಟವಶಾತ್ ಕೆಲವರ (ವಿರೋಧ ಪಕ್ಷಗಳ) ಮನಸ್ಸು 2014ಕ್ಕೆ ಅಂಟಿಕೊಂಡಿದೆ" ಎಂದು ಪ್ರಧಾನಿ ಮೋದಿ ವಿರೋಧಪಕ್ಷಗಳನ್ನು ಗೇಲಿ ಮಾಡಿದರು.
'ನೀವು ನನ್ನನ್ನು ವಿರೋಧಿಸಬಹುದು. ಆದರೆ ಫಿಟ್ ಇಂಡಿಯಾ ಚಳವಳಿ ಮತ್ತು ಇತರ ಯೋಜನೆಗಳನ್ನು ಏಕೆ ವಿರೋಧಿಸುತ್ತಿದ್ದೀರಿ? ವರ್ಷಗಳ ಹಿಂದೆಯೇ ನೀವು ಹಲವು ರಾಜ್ಯಗಳಲ್ಲಿ ಸೋತಿದ್ದೀರಿ. ಇದರಲ್ಲಿ ಯಾವುದೇ ಆಶ್ಚರ್ಯವೂ ಇಲ್ಲ. ಮುಂದಿನ 100 ವರ್ಷಗಳ ಕಾಲ ಅಧಿಕಾರಕ್ಕೆ ಬರಬಾರದೆಂದು ನೀವು ನಿರ್ಣಯಿಸಿದಂತೆ ಕಾಣುತ್ತಿದೆ' ಎಂದು ಮೋದಿ ವಾಗ್ದಾಳಿ ನಡೆಸಿದರು.
PublicNext
07/02/2022 08:58 pm