ಮೈಸೂರು: ಕಾಂಗ್ರೆಸ್ ಹಿರಿಯ ಮುಖಂಡ ತನ್ವೀರ್ ಸೇಠ್ ಪೂರ್ವಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡವರು ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, 'ಇದು ನಮ್ಮ ತಾತನದ್ದೇ ದೇಶ. ನಿಮ್ಮ ತಾತ ಕೂಡ ಹಿಂದೂ ಆಗಿದ್ದರು ಎಂಬುದನ್ನು ಮರೆಯಬೇಡಿ. ಇಲ್ಲೇ ಹುಟ್ಟಿ ಬೆಳೆದು ನಂತರ ಮತಾಂತರಗೊಂಡರು. ಯಾರೂ ಮೆಕ್ಕಾ, ಮದೀನ, ರೋಮ್, ಬೆತ್ಲಹೇಮ್‌ನಿಂದ ಬಂದವರಲ್ಲ. ಇದನ್ನು ತನ್ವೀರ್ ಸೇಠ್ ಅರ್ಥ ಮಾಡಿಕೊಂಡು ಮಾತನಾಡಿದರೆ ಒಳಿತು' ಎಂದು ಸಲಹೆ ನೀಡಿದ್ದಾರೆ.
PublicNext
07/02/2022 04:32 pm