ಅಲಿಗಢ (ಉತ್ತರ ಪ್ರದೇಶ): ನಮ್ಮ ಸರ್ಕಾರ ಜನಸಾಮಾನ್ಯರಿಗಾಗಿ ರಸ್ತೆ, ನೀರು, ಆಸ್ಪತ್ರೆ, ಸಾರಿಗೆ, ಶಿಕ್ಷಣ ವಸತಿ ನೀಡಿದ್ದೇವೆ. ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನೀಡಿದ್ದೇವೆ. ಆದ್ರೆ ಸಮಾಜವಾದಿ ಪಕ್ಷದ ನಾಯಕರು ಕಬರಿಸ್ತಾನದ (ಸ್ಮಶಾನ) ಸುತ್ತ ಬೌಂಡರಿ ನಿರ್ಮಿಸಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಲಿಗಢದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಉತ್ತರ ಪ್ರದೇಶದ ಜನರಿಗೆ ಮೂಲ ಸೌಕರ್ಯ ಒದಗಿಸಿದ್ದೇವೆ. ಆದರೆ ಸಮಾಜವಾದಿ ನಾಯಕರು ಕಬರಿಸ್ತಾನ ಸುತ್ತ ಬೌಂಡರಿ ನಿರ್ಮಿಸಿದ್ದಾರೆ. ಹಾಗಾಗಿ ನೀವು ಕಬರಿಸ್ತಾನದಿಂದಲೇ ವೋಟ್ ಕೇಳಿ ಎಂದ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.
PublicNext
07/02/2022 09:13 am