ದಾವಣಗೆರೆ: ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಈಗ ಎಲ್ಲೆಡೆ ಹರಡಲಾರಂಭಿಸಿದೆ. ಇನ್ನು ಈ ಬಗ್ಗೆ ನ್ಯಾಮತಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು, ಯಾವುದೇ ಕಾರಣಕ್ಕೆ ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ಹಿಜಾಬ್ ಸಂಬಂಧ ಗಲಾಟೆ ಮಾಡುತ್ತಿರುವವರಿಗೆ ರೇಣುಕಾಚಾರ್ಯ ಬುದ್ದಿವಾದ ಹೇಳಿದ್ದು, ಬಿಜೆಪಿ ಆದರೂ ಅಷ್ಟೇ, ಕಾಂಗ್ರೆಸ್ ಸೇರಿದಂತೆ ಬೇರೆ ಯಾರಾದರೂ ಅಷ್ಟೇ. ಉಡುಪಿ, ಮಂಗಳೂರು, ಕುಂದಾಪುರದಲ್ಲಿ ಹಿಜಾಬ್ ಸಂಘರ್ಷ ನಡೆಯುತ್ತಿದೆ.
ಇದು ವಿದ್ಯಾರ್ಥಿಗಳನ್ನ ಸಂಘರ್ಷಕ್ಕೆ ದೂಡಿದಂತಾಗುತ್ತಿದೆ ಎಂದರು.
ಇದರಿಂದ ಶಾಲೆ ಆಡಳತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸಮಸ್ಯೆಯಾಗುತ್ತೆ.
ಶಾಲೆ, ಕಾಲೇಜುಗಳಲ್ಲಿ ಸಮಾನತೆ ಕಾಪಾಡಬೇಕಾಗಿದೆ.ಹೀಗಾಗಿ ಸರ್ಕಾರ ಸಮವಸ್ತ್ರ ಸಂಹಿತೆ ಜಾರಿ ಮಾಡಿದೆ. ನಾಲ್ಕೈದು ಜನರು ಹಿಜಾಬ್ ಧರಿಸಿದ್ದಕ್ಕೆ ಉಡುಪಿಯಲ್ಲಿ ಸಂಘರ್ಷ ಶುರುವಾಗಿದೆ.
ಅಲ್ಪಸಂಖ್ಯಾತರು ಹಿಜಾಬ್ ಹಾಕಿದರೆ ಹಿಂದುಗಳು ಕೇಸರಿ ಶಾಲು ಧರಿಸುತ್ತಿದ್ದಾರೆ.ಇದನ್ನ ಯಾರು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ನಾವು ಕೇಸರಿ ಟವಲ್ ಹಾಕ್ತೇವೆ. ಕೊರಳಿಗೆ ರುದ್ರಾಕ್ಷಿ ಧರಿಸುತ್ತೇವೆ. ಹಣೆಗೆ ಗಂಧ, ಭಸ್ಮ ಹಚ್ಚಿಕೊಳ್ಳುತ್ತೇವೆ. ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದ್ದು ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.
PublicNext
05/02/2022 05:52 pm