ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಬೇಕು ಎನ್ನುವ ವಿದ್ಯಾರ್ಥಿಯರನ್ನು ಸಸ್ಪೆಂಡ್ ಮಾಡಿ : ಗುಡುಗಿದ ಮುತಾಲಿಕ್

ಬೆಳಗಾವಿ : ರಾಜ್ಯದಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ. ಹಿಜಾಬ್ ಪ್ರಕರಣ ಎರಡು ತಿಂಗಳಿಂದ ನಡೆಯುತ್ತಿದೆ ಆಗಲೇ ಹಿಜಾಬ್ ಧಾರಿ ವಿದ್ಯಾರ್ಥಿನಿಯರನ್ನಕಾಲೇಜಿನಿಂದ ಅಮಾನತ್ತ ಮಾಡಿದ್ದರೆ ಈ ವಿಚಾರ ರಾಜ್ಯ ವ್ಯಾಪಿ ವಿಸ್ತಾರ ಆಗುತ್ತಿರಲಿಲ್ಲ ಎಂದಿದ್ದಾರೆ.

ಹಿಜಾಬ್ ಬಗ್ಗೆ ನಿಮಗೆ ಹಕ್ಕು ಸ್ವಾತಂತ್ರ್ಯ ಇರಬಹುದು ಆದರೆ ಅದು ಕಾಲೇಜಿನ ಹೊರಗಡೆ, ಒಂದೊಮ್ಮೆ ಕಾಲೇಜಿನ ಆವರಣಕ್ಕೆ ಬಂದರೆ ಕಾಲೇಜ್ ನಿಯಮದಂತೆ ನಡೆದುಕೊಳ್ಳಬೇಕು ಅಲ್ಲಿ ಹಿಜಾಬ್ ,ಬುರಕಾ ಹಾಕ್ತಿನಿ ಅಂದ್ರೆ ನಡೆಯಲ್ಲ ಎಂದು ಗುಡುಗಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರ ಹಿಂದೆ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ , ಎಂಐಎಂ ಸಂಘಟನೆ ಇದೆ.ಇವರ ನೀಚ ಕೃತ್ಯಕ್ಕೆ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ. ವಿದ್ಯಾರ್ಜನೆಯಿಂದ ಅವರನ್ನು ಬಹಿಷ್ಕಾರ ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಇಸ್ಲಾಮಿಕರಣ ಮಾಡಲಾಗುತ್ತಿದೆ.

ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಬಾರದು. 6 ಜನ ವಿದ್ಯಾರ್ಥಿನಿಯರನ್ನ ಕೂಡಲೇ ಅಮಾನತ್ತ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

04/02/2022 01:54 pm

Cinque Terre

56.22 K

Cinque Terre

43

ಸಂಬಂಧಿತ ಸುದ್ದಿ