ಲಖನೌ:ಉತ್ತರ ಪ್ರದೇಶದಲ್ಲಿ ಏನ್ ಬೇಕಾದರೂ ಆಗಬಹುದು. ಇಲ್ಲಿ ಇರೋದು ಯೋಗಿ ಆದಿತ್ಯನಾಥ ಅವರ ಸರ್ಕಾರ. ಹೌದು. ಮುಂಬರೋ ವಿಧಾನಸಭೆ ಚುನಾವಣೆಗೆ ಇಲ್ಲಿ ಭಾರಿ ಪ್ರಚಾರವೇ ನಡೆಯುತ್ತಿದೆ. ಭಾರಿ ಬದಲಾವಣೆಗಳೂ ಆಗುತ್ತಿವೆ.
ಅದರಂತೆ ಇಲ್ಲಿಯ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮರು ದಿನವೇ ಬಿಜೆಪಿ ಪಕ್ಷವನ್ನೂ ಸೇರಿ ಬಿಟ್ಟಿದ್ದಾರೆ.
ಅಷ್ಟೇ ನೋಡಿ, ಇದೇ ರಾಜೇಶ್ವರ್ ಸಿಂಗ್ ಗೆ ಲಖನೌನ ಸರೋಜಿನಿ ನಗರದಿಂದಲೇ ಸ್ಪರ್ಧಿಸಲು ಈಗಾಗಲೇ ಟಿಕೆಟ್ ಕೂಡ ಸಿಕ್ಕು ಬಿಟ್ಟಿದೆ. ಈ ಸ್ಥಾನದ ಮೇಲೆ ಕಣ್ಣು ಹಾಕಿಯೇ ಬಿಜೆಪಿ ಸೇರಿದ್ದ ಮುಲಾಯಂ ಸಿಂಗ್ ಯಾದವ್ ಸೊಸೆ ಅರ್ಪಣಾ ಸಿಂಗ್, ಈ ಬೆಳವಣಿಗೆಯಿಂದ ಈಗ ನಿರಾಶರಾಗಿದ್ದಾರೆ.
PublicNext
03/02/2022 10:23 pm