ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೆರೆ ಪಾಕಿಸ್ತಾನ ಮತ್ತು ಚೀನಾ ದೇಶವನ್ನ ಒಟ್ಟಿಗೆ ತಂದಿದ್ದಾರೆ ಎಂದು ರಾಹುಲ್ ಗಾಂಧಿ ಸಂಸತ್ ನಲ್ಲಿ ನಿನ್ನೆ ಟೀಕೆ ಮಾಡಿದ್ದರು. ಈ ಟೀಕೆಗೆ ಪ್ರತಿಯಾಗಿ ಇಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈ ಶಂಕರ್ ಇದಕ್ಕೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.
1963 ರಲ್ಲಿ ಪಾಕಿಸ್ತಾನವು ಶಾಕ್ಸ್‌ಗಾಮ್ ಕಣಿವೆಯನ್ನ ಚೀನಾಕೆ ಅಕ್ರಮವಾಗಿಯೇ ಹಸ್ತಾಂತರಿಸಿದೆ. 1970 ಚೀನಾ ಪಿಓಕೆ ಮೂಲಕ ಕಾರಕೋರಂ ಹೆದ್ದಾರಿ ನಿರ್ಮಿಸಿತ್ತು. ಎರಡೂ ದೇಶಗಳು ಪರಮಾಣು ಸಹಯೋಗವನ್ನ ಹೊಂದಿದ್ದವು. 2013 ರಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭವಾಯಿತು ಅಂತಲೇ ರಾಹುಲ್ ಮಾತಿಗೆ ಸಚಿವ ಜೈಶಂಕರ್ ಈ ಆಧಾರ ಸಹಿತ ತಿರುಗೇಟು ಕೊಟ್ಟಿದ್ದಾರೆ.
PublicNext
03/02/2022 09:57 pm