ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ. 7 ದಿಲ್ಲಿ ಪ್ರವಾಸ ಬೆಳೆಸಲಿದ್ದಾರೆ. ಇವರ ಈ ಪ್ರವಾಸ ಸಾಕಷ್ಟು ನಿರೀಕ್ಷಗಳಿಗೆ ಕಾರಣವಾಗಿದೆ. ಸದ್ಯ ರಾಜ್ಯದ ಸಂಸದರೊಂದಿಗೆ ಮತ್ತು ಅಂತಾರಾಜ್ಯ ಜಲ ವಿವಾದ ಕುರಿತ ಕಾನೂನು ತಜ್ಞರೊಂದಿಗೆ ಸಭೆ ನಡೆಸುವುದು ಈ ಭೇಟಿಯ ಉದ್ದೇಶ ಎಂದು ಮಾಧ್ಯಮಕ್ಕೆ ಸಿಎಂ ತಿಳಿಸಿದ್ದಾರೆ.
ಈ ನಡುವೆಯೂ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿ ಕೈಗೊಳ್ಳಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಸಂಪುಟ ವಿಸ್ತರಣೆಗೆ ಸೀಮಿತವಾದರೆ ಖಾಲಿಯಿರುವ 4 ಸ್ಥಾನ ಭರ್ತಿ ಮಾಡಲಾಗುತ್ತದೆ. ಮಂತ್ರಿಮಂಡಲ ಸೇರಲು ಎರಡು ಡಜನ್ ಗೂ ಹೆಚ್ಚು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಇವರಲ್ಲಿ ಬಹುತೇಕರು ಹಿರಿಯ ಶಾಸಕರು. ಜಾತಿ, ಪ್ರಾದೇಶಿಕತೆ ಆಧಾರದಲ್ಲಿ ಕಿರಿಯ ಶಾಸಕರೂ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ.
ಇದರಿಂ ದ ಸಿಎಂ ದಿಲ್ಲ ಪ್ರವಾಸದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.
PublicNext
03/02/2022 07:40 am