ಕೊಪ್ಪಳ:ರಾಜ್ಯದಲ್ಲಿ ಈ ಬಾರಿಯೂ ಮೂವರು ಸಿಎಂ ಆಗ್ತಾರೆ. ಬಸವರಾಜ್ ಬೊಮ್ಮಾಯಿ ಸಿಎಂ ಅವಧಿ ಕೇವಲ 6 ತಿಂಗಳು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ,ಬಸವರಾಜ್ ಬೊಮ್ಮಾಯಿ ಸಿಎಂ ಆಗೋ ಮೊದಲೇ, ಕೇವಲ 6 ತಿಂಗಳು ಮಾತ್ರ ನೀವು ಸಿಎಂ ಆಗಿರುತ್ತೀರಾ ಅಂತ ಬಿಜೆಪಿ ಹೈಕಮಾಂಡ್ ಕಂಡಿಷನ್ ಹಾಕಿದೆ ಎಂದು ಹೇಳಿದ್ದಾರೆ.
ಸದ್ಯ ಸತೀಶ್ ಜಾರಕಿಹೊಳಿ ನೀಡಿರೋ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ.
PublicNext
02/02/2022 05:36 pm