ನವದೆಹಲಿ: 'ಮಿತ್ರೋ' ಎನ್ನುವುದು ಒಮಿಕ್ರಾನ್‌ಗಿಂತ ಅಪಾಯಕಾರಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ಟ್ವೀಟ್ ಮಾಡಿರುವ ಶಶಿ ತರೂರ್, "ಓ ಮಿತ್ರೋ ಎನ್ನುವುದು ಒಮಿಕ್ರಾನ್‌ಗಿಂತ ಭಾರೀ ಅಪಾಯಕಾರಿ. ಹೆಚ್ಚಿದ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ಕಪಟ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಲ್ಲಿ ನಾವು ಪ್ರತಿದಿನದ ಪರಿಣಾಮಗಳನ್ನು ಕಾಣುತ್ತಿದ್ದೇವೆ. ಈ ವೈರಸ್‌ನ ಯಾವುದೇ 'ಸೌಮ್ಯ ರೂಪಾಂತರ' ಇಲ್ಲ" ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಾಗಿ 'ಮಿತ್ರೋ' ಎಂಬ ಮೂಲಕವೇ ತಮ್ಮ ಭಾಷಣವನ್ನು ಆರಂಭಿಸುತ್ತಾರೆ. ಹೀಗಾಗಿ ಶಶಿ ತರೂರ್ ಅವರು ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
PublicNext
31/01/2022 07:08 pm