ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ, ಜೆಡಿಎಸ್ ನಿಂದ ಹಲವರು ಕಾಂಗ್ರೆಸ್ ಗೆ: ಶಾಸಕ ಎಸ್. ರಾಮಪ್ಪ

ದಾವಣಗೆರೆ: ಬಿಜೆಪಿ, ಜೆಡಿಎಸ್ ನ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಹೇಳಿದ್ದಾರೆ.

ಹರಿಹರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ನಿಂದ ಸಾಕಷ್ಟು ಜನ ಕಾಂಗ್ರೆಸ್ ಗೆ ಬರ್ತಾ ಇದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಯಾರಿಗೂ ಸರಿಯಾದ ಅನುದಾನ ನೀಡ್ತಿಲ್ಲ. ಬಿಜೆಪಿ ಶಾಸಕರಿಗೂ ಸರಿಯಾದ ಅನುದಾನ ಸಿಗ್ತಾ ಇಲ್ಲ ಎಂದು ತಿಳಿಸಿದರು.

ಬಿಜೆಪಿ ಶಾಸಕರಿಗೂ ಅನುದಾನ ನೀಡಿದರೆ ಶೇಕಡಾ 15ರಿಂದ 20ರಷ್ಟು ಕಮಿಷನ್ ಕೊಡಬೇಕು. ಹೀಗಾಗಿ ಇದರಿಂದ ಬೇಸತ್ತು ಬಿಜೆಪಿ-ಜೆಡಿಎಸ್ ನಿಂದ ಕಾಂಗ್ರೆಸ್ ಬರುತ್ತಿದ್ದಾರೆ. ಬಂದ ಎಲ್ಲರಿಗೂ ಟಿಕೆಟ್ ನೀಡೋಕೆ ಆಗಲ್ಲ. ಕಾಂಗ್ರೆಸ್ ವೀಕ್ ಇರೋ ಜಾಗದಲ್ಲಿ ಒಳ್ಳೆಯ ಅಭ್ಯರ್ಥಿ ಇದ್ರೆ ಕಾಂಗ್ರೆಸ್‌ ಟಿಕೆಟ್ ನೀಡಲಾಗುತ್ತೆ. ನೂರಕ್ಕೆ ನೂರಷ್ಟ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದದ್ದು ಬೇಸರದ ವಿಚಾರ. ಇಬ್ರಾಹಿಂ ಗೆ ಸ್ಥಾನಮಾನ ಸಿಗಬೇಕಿತ್ತು. ಆದರೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತೆ ಕಾದು ನೋಡಬೇಕು ಎಂದು ಹೇಳಿದರು.

Edited By : Shivu K
PublicNext

PublicNext

31/01/2022 09:12 am

Cinque Terre

48.24 K

Cinque Terre

3

ಸಂಬಂಧಿತ ಸುದ್ದಿ