ಪಣಜಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ ಎಂದು ಕೆಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸದ್ಯ ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಆಗಿರುವ ಅಮಿತ್ ಶಾ ಗೋವಾದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಕಾಂಗ್ರೆಸ್‌ನ ಗಾಂಧಿ ಪರಿವಾರವು ಗೋವಾವನ್ನು ತಮ್ಮ ಪ್ರವಾಸದ ತಾಣವಾಗಿ ಪರಿಗಣಿಸಿದೆ. ಆದರೆ ಬಿಜೆಪಿಯ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಚಿನ್ನದ ಗೋವಾ ಕನಸನ್ನು ನನಸು ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿಯಿಂದ ಮಾತ್ರ ಗೋವಾದ ಅಭಿವೃದ್ಧಿ ಸಾಧ್ಯ. ನಿಮಗೆ ಬಿಜೆಪಿಯ ಚಿನ್ನದ ಗೋವಾ ಬೇಕಾ ಅಥವಾ ಕಾಂಗ್ರೆಸ್‍ನ ಗಾಂಧಿ ಪರಿವಾರದ ಗೋವಾ ಬೇಕೇ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಅಮಿತ್ ಶಾ ಹೇಳಿದ್ದಾರೆ.
PublicNext
31/01/2022 08:45 am